ಸನ್ಮಾರ್ಗ ವಾರ್ತೆ
ಬೆಂಗಳೂರು,ಆ.5: ಮಾಜಿ ಸಚಿವ ಜೆಡಿಎಸ್ ಶಾಸಕ ಬಿ. ಸತ್ಯನಾರಾಯಣ(67) ನಿಧನರಾದರು. ಕರುಳಿಗೆ ಸಂಬಂಧಿಸಿದ ಅಸೌಖ್ಯದಿಂದ ಬಳಲುತ್ತಿದ್ದರು. ಮಂಗಳವಾರ ರಾತ್ರೆ 10:45ಕ್ಕೆ ಅವರು ನಿಧನರಾದರು. ಕಳೆದ ದಿವಸ ಆರೋಗ್ಯ ಕೆಟ್ಟಿದ್ದರಿಂದ ಬೆಂಗಳೂರಿನ ಮಣಿಪಾಲ ಆಸ್ಪತ್ರೆಗೆ ಸೇರಿಸಲಾಗಿತ್ತು. ತುಮಕೂರಿನ ಶಿರ ಕ್ಷೇತ್ರದ ಶಾಸಕರು. ಜೆಡಿಎಸ್ ನಾಯಕರು. ಮೂರು ಬಾರಿ ಶಾಸಕರೂ ಎರಡು ಬಾರಿ ಸಂಸದರೂ ಆಗಿದ್ದಾರೆ.
ಕಾಂಗ್ರೆಸ್-ಜೆಡಿಎಸ್ ಸಖ್ಯ ಸರಕಾರದಲ್ಲಿ ಕರ್ನಾಟಕ ಆರ್‌ಟಿಸಿಯ ಅಧ್ಯಕ್ಷರ ಸ್ಥಾನವನ್ನು ವಹಿಸಿದ್ದರು. ಪತ್ನಿ, ಐವರು ಹೆಣ್ಣು ಮಕ್ಕಳು ಹಾಗೂ ಓರ್ವ ಪುತ್ರ ಅವರಿಗಿದ್ದಾರೆ. ಸತ್ಯ ನಾರಾಯಣರ ನಿಧನಕ್ಕೆ ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಮಾಜಿ ಪ್ರಧಾನಿ ಎಚ್.ಡಿ.ದೇವೆಗೌಡ ಶೋಕ ಸೂಚಿಸಿದ್ದಾರೆ. ಮೂರು ದಶಕಗಳಿಂದ ಆತ್ಮೀಯ ಮಿತ್ರರಾಗಿದ್ದ ಸತ್ಯನಾರಾಯಣರ ನಿಧನ ತೀರ ನಷ್ಟವುಂಟು ಮಾಡಿದೆ ಎಂದು ಅವರು ಹೇಳಿದರು. ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್, ಜೆಡಿಎಸ್ ನಾಯಕ ಮಾಜಿಮುಖ್ಯಮಂತ್ರಿ ಎಚ್‍ಡಿ ಕುಮಾರಸ್ವಾಮಿ, ಸಚಿವರಾದ ಡಾ.ಕೆ.ಸುಧಾಕರ್ ಮೊದಲಾದವರು ಸಂತಾಪ ಸೂಚಿಸಿದ್ದಾರೆ.
ಓದುಗರೇ, ಸನ್ಮಾರ್ಗ ಫೇಸ್‌ಬುಕ್ ಪೇಜ್‌ನ್ನು ಲೈಕ್ ಮಾಡುವ ಮೂಲಕ ನಮ್ಮನ್ನು ಬೆಂಬಲಿಸಿ.












