ಧೂಮಪಾನಿಗಳಿಗೆ ಕೊರೊನಾ ಸಾಧ್ಯತೆ ಕಡಿಮೆ- ಸಂಶೋಧಕರು

0
1493

ಸನ್ಮಾರ್ಗ ವಾರ್ತೆ

ಪ್ಯಾರಿಸ್, ಎ. 24: ಹೊಗೆಸೊಪ್ಪು ಇರುವ ನಿಕೊಟಿನ್‍ಗೆ ಕೊರೊನಾ ಪ್ರತಿರೋಧ ಮಾಡುವ ಸಾಮರ್ಥ್ಯವಿದೆ ಎಂದು ಫ್ರಾನ್ಸಿನ ಸಂಶೋಧಕರು ಹೇಳಿಕೆ ನೀಡಿದ್ದಾರೆ. ಪ್ಯಾರಿಸ್‍ನ ಆಸ್ಪತ್ರೆಗೆ ಬಂದ 343 ಕೊರೊನಾ ರೋಗಿಗಳ ಮೇಲೆ ನಿಗಾ ಇರಿಸಿ ನೋಡಿದಾಗ ನಿಕೊಟಿನ್ ಕೊರೊನಾ ಪ್ರತಿರೋಧ ಸಾಮರ್ಥ್ಯ ಹೊಂದಿರುವುದು ಪತ್ತೆಯಾಗಿದೆ. ತಂಬಾಕು ಸೇವಿಸುವ 139 ರೋಗಿಗಳಲ್ಲಿ ಕೊರೊನಾ ಸಣ್ಣ ಲಕ್ಷಣಗಳು ಮಾತ್ರ ಕಂಡು ಬಂದಿತ್ತು. ಹೊಗೆ ಸೊಪ್ಪು ಸೇದುವ ಶೇ. 5ರಷ್ಟೇ ರೋಗಿಗಳು ಆಸ್ಪತ್ರೆಗೆ ಬಂದಿದ್ದಾರೆ. ಉಳಿದ ರೋಗಿಗಳಲ್ಲಿ ಶೇ. 95ರಷ್ಟು ರೋಗಿಗಳು ತಂಬಾಕು ಸೇದಿದವರಲ್ಲ. ನಂತರ ಸಂಶೋಧಕರು ನಿಕೊಟಿನ್‍ಗೆ ಕೊರೊನ ಪ್ರತಿರೋಧಿಸಲು ಸಾಧ್ಯವಿದೆ ಎಂಬ ಅಭಿಪ್ರಾಯಕ್ಕೆ ಬಂದರು.

ಇಂಟರ್ನಲ್ ಮೆಡಿಸಿನ್ ವಿಭಾಗದ ಡಾ. ಝಹೀರ್ ಅಮೊರ ಅವರು ಸಂಶೋಧನೆಗೆ ನೇತೃತ್ವವನ್ನು ನೀಡಿದ್ದರು. ಆರೋಗ್ಯ ಕಾರ್ಯಕರ್ತರು ಇದಕ್ಕೆ ಸಂಬಂಧಿಸಿದ ಹೆಚ್ಚಿನ ಸಂಶೋಧನೆಯಲ್ಲಿ ನಿರತರಾಗಿದ್ದಾರೆ. ಕೋಶದಲ್ಲಿ ಅಂಟಿಹಿಡಿಯುವ ನಿಕೊಟಿನ್ ಕೋಶಗಳಿಗೆ ವೈರಸ್ ಪ್ರವೇಶಿಸದಂತೆ ತಡೆಯುತ್ತದೆ ಎಂದು ಸಂಶೋಧನೆಯಲ್ಲಿ ಭಾಗವಹಿಸಿರುವ ಪಾಸ್ಚರ್ ಇನ್ಸಿಟಿಟ್ಯೂಟ್ ನ್ಯೂರೊ ಬಯೊಲಜಿಸ್ಟ್ ಜಿನ್ ಪಿಯರ್ ಶಾಮಕ್ಸ್ ಹೇಳಿದರು. ಚೀನದಲ್ಲಿಯೂ ಇಂತಹ ಸಂಶೋಧನೆ ಫಲಿತಾಂಶ ಬಂದಿತ್ತು. 1000 ರೋಗಿಗಳಲ್ಲಿ ಹೊಗೆಬತ್ತಿ ಸೇದುವವರ ಸಂಖ್ಯೆ 12.6 ಶೇಕಡಾ ಮಾತ್ರ ಇತ್ತು ಎಂದು ನ್ಯೂ ಇಂಗ್ಲೆಂಡ್ ಜರ್ನಲ್ ಆಫ್ ಮೆಡಿಸಿನ್ ಹೊರಬಿಟ್ಟ ವರದಿಯಲ್ಲಿ ಕಂಡು ಬಂದಿದೆ.

ಓದುಗರೇ, sanmarga ಫೇಸ್ ಬುಕ್ ಪೇಜ್ ಅನ್ನು ಲೈಕ್ ಮಾಡುವ ಮೂಲಕ ನಮ್ಮನ್ನು ಬೆಂಬಲಿಸಿ.