ಅತ್ಯಾಚಾರ ಪ್ರಕರಣ| ಆರೋಪಿಗೆ ಜಾಮೀನು ನೀಡಿದ ಮುಂಬೈ ಹೈಕೋರ್ಟ್: ಸಂತ್ರಸ್ತೆ ಒಂದು ವರ್ಷದೊಳಗೆ ಪತ್ತೆಯಾದರೆ ಮದುವೆಯಾಗಲು ಆದೇಶ!

0
176

ಸನ್ಮಾರ್ಗ ವಾರ್ತೆ

ಮುಂಬೈ: ಅತ್ಯಾಚಾರ ಸಂತ್ರಸ್ತೆಯನ್ನು ಮದುವೆಯಾಗಬೇಕು ಎಂಬ ಕಡ್ಡಾಯ ಷರತ್ತು ವಿಧಿಸಿ 26 ವರ್ಷದ ಆರೋಪಿಗೆ ಮುಂಬೈ ಹೈಕೋರ್ಟ್ ಜಾಮೀನು ನೀಡಿದೆ.

ನಾಪತ್ತೆಯಾಗಿರುವ ಸಂತ್ರಸ್ತೆ ಒಂದು ವರ್ಷದೊಳಗೆ ಪತ್ತೆಯಾದರೆ ಆಕೆಯನ್ನು ಮದುವೆಯಾಗಬೇಕು ಎಂದು ಷರತ್ತು ವಿಧಿಸಿದ ನ್ಯಾಯಮೂರ್ತಿ ಭಾರತಿ ಡಾಂಗ್ರೆ ಆರೋಪಿಗೆ ಜಾಮೀನು ನೀಡಿದ್ದಾರೆ.

ಆರೋಪಿ ಹಾಗೂ 22 ವರ್ಷದ ಸಂತ್ರಸ್ತೆ ಕೆಲವು ವರ್ಷಗಳಿಂದ ಒಪ್ಪಿತ ಸಂಬಂಧ ಹೊಂದಿದ್ದರು. 2019ರಲ್ಲಿ ಆಕೆ ಗರ್ಭಿಣಿ ಎಂದು ಅರಿತ ಬಳಿಕ ಆರೋಪಿ ಆಕೆಯಿಂದ ದೂರವಾಗುವ ಪ್ರಯತ್ನ ಮಾಡಿದ್ದ. ಇದರಿಂದ ಆತಂಕಕ್ಕೆ ಒಳಗಾದ ಯುವತಿ 2020 ಫೆಬ್ರವರಿಯಲ್ಲಿ ಮುಂಬೈ ಪೊಲೀಸರಿಗೆ ದೂರು ನೀಡಿ ಆರೋಪಿ ವಿರುದ್ಧ ಅತ್ಯಾಚಾರ ಹಾಗೂ ವಂಚನೆ ಪ್ರಕರಣ ದಾಖಲಿಸಿದ್ದಳು. ಆ ಬಳಿಕ ಪೊಲೀಸರು ಆರೋಪಿಯನ್ನು ಬಂಧಿಸಿ ಜೈಲಿಗಟ್ಟಿದ್ದು, ಆ ಬಳಿಕ ಯುವತಿ ನಾಪತ್ತೆಯಾಗಿದ್ದಳು.