ಸನ್ಮಾರ್ಗ ವಾರ್ತೆ
ಹೊಸದಿಲ್ಲಿ, ಜು.20: ಬಿಜೆಪಿಯ ಸಂಸದ ಕುಸ್ತಿ ಫೆಡರೇಷನ್ ಮಾಜಿ ಅಧ್ಯಕ್ಷ ಬೃಜ್ ಭೂಷಣ್ ಶರಣ್ ಸಿಂಗ್‍ರಿಗೆ ಇಂದು ದಿಲ್ಲಿ ಕೋರ್ಟ್ ಜಾಮೀನು ನೀಡಿದೆ.
ರೋಸ್ ಅವೆನ್ಯೋ ಕೋರ್ಟ್ ಬೃಜ್ ಭೂಷಣ್‍ಗೆ ಜಾಮೀನು ಮಂಜೂರು ಮಾಡಿದೆ. ಬೃಜ್ ಭೂಷಣ್ ಮೇಲೆ ಮಹಿಳಾ ಕುಸ್ತಿ ಪಟುಗಳು ಲೈಂಗಿಕ ಕಿರುಕುಳ ಆರೋಪ ಹೊರಿಸಿ ದೂರು ನೀಡಿದ್ದರು. ಈ ಪ್ರಕರಣದಲ್ಲಿ ರೋಸ್ ಅವೆನ್ಯೂ ಕೋರ್ಟು ಹಲವು ಶರ್ತಗಳೊಂದಿಗೆ ಬೃಜ್ ಭೂಷಣ್‍ಗೆ ಜಾಮೀನು ನೀಡಿದೆ.
ಕೋರ್ಟು ಬೃಜ್ ಭೂಷಣ್‍ರಿಗೆ ಜಾಮೀನು ಮಂಜೂರು ಮಾಡುವಾಗ ಸಾಕ್ಷಿಗಳ ಮೇಲೆ ಪ್ರತ್ಯಕ್ಷ ಮತ್ತು ಅಪ್ರತ್ಯಕ್ಷ ವಾಗಿ ಪ್ರಭಾವ ಬೀರಬಾರದು. ಕೋರ್ಟಿನ ಅನುಮತಿ ಪಡೆಯದೆ ವಿದೇಶಕ್ಕೆ ಹೋಗಬಾರದು ಎಂದು ಶರ್ತ ವಿಧಿಸಿದೆ.
ಈ ಹಿಂದೆ ಜುಲೈ 18ಕ್ಕೆ ಬೃಜ್ ಭೂಷಣ್ ಸಿಂಗ್‍ರಿಗೆ ಕೋರ್ಟು ಮಧ್ಯಂತರ ಜಾಮೀನು ನೀಡಿತ್ತು. ಬೃಜ್ ಭೂಷಣ್ ವಿರುದ್ಧ ಆರು ಮಹಿಳಾ ಕುಸ್ತಿಪಟುಗಳು ಮತ್ತು ಓರ್ವ ಅಪ್ರಾಪ್ತ ಕುಸ್ತಿ ಪಟುಗೆ ಲೈಂಗಿಕ ಕಿರುಕುಳ ನೀಡಿದ ಪ್ರಕರಣ ದಾಖಲಾಗಿದೆ. ಬೃಜ್ ಭೂಷಣ್ ಬಂಧನಕ್ಕೆ ಆಗ್ರಹಿಸಿ ದಿಲ್ಲಿ ಜಂತರ್ ಮಂತರ್ ನಲ್ಲಿ ಮಹಿಳಾ ಕುಸ್ತಿ ಪಟುಗಳು ಪ್ರತಿಭಟನೆ ನಡೆಸಿದ್ದು ದೇಶಾದ್ಯಂತ ಗಮನ ಸೆಳೆದಿತ್ತು.












