PWD ಭರವಸೆ; ಕಳಪೆ ಕಾಮಗಾರಿ ವಿರುದ್ಧ ಹಮ್ಮಿಕೊಂಡಿದ್ದ ಧರಣಿ ತಾತ್ಕಾಲಿಕ ಮುಂದೂಡಿದ ಬಜ್ಪೆ ನಾಗರಿಕರ ಹಿತರಕ್ಷಣಾ ವೇದಿಕೆ

0
184

ಸನ್ಮಾರ್ಗ ವಾರ್ತೆ

ಬಜ್ಪೆ ನಾಗರಿಕರ ಹಿತರಕ್ಷಣಾ ವೇದಿಕೆಯು ಸುಮಾರು ಒಂದು ತಿಂಗಳಿನಿಂದ ಬಜ್ಪೆ ಮುಖ್ಯ ರಸ್ತೆಯ ಕಳಪೆ ಕಾಮಗಾರಿ, ನಿಸರ್ಗ ಹೋಟೆಲ್ ಬಳಿಯಿಂದ ಚೆಕ್ ಪೋಸ್ಟ್ ತನಕ ಮುಂದುವರೆದ ಕಾಂಕ್ರಿಟ್ ರಸ್ತೆ ಮತ್ತು ಭಾರತ್ ಪೆಟ್ರೋಲ್ ಪಂಪ್ ನಿಂದ ಚರ್ಚ್ ಸೇತುವೆವರೆಗೆ ಚತುಷ್ಪಥ ರಸ್ತೆಯನ್ನು ಕೂಡಲೇ ನಿರ್ಮಾಣ ಮಾಡಬೇಕು ಎಂಬ ಬೇಡಿಕೆಯೊಂದಿಗೆ ಸತತ ಹೋರಾಟ ಮಾಡುತ್ತಾ ಬಂದಿದೆ.

ಈ ನಿಟ್ಟಿನಲ್ಲಿ ನಮ್ಮ ಬೇಡಿಕೆ ಈಡೇರದಿದ್ದಾಗ ಸಮಿತಿ ತೀರ್ಮಾನದಂತೆ ದಿನಾಂಕ 16/11/23 ರಂದು ಬೆಳಿಗ್ಗೆ ಧರಣಿ ಸತ್ಯಾಗ್ರಹ ಹಮ್ಮಿಕೊಂಡಿದ್ದು, ನಮ್ಮ ಧರಣಿಗೆ ಮಣಿದ PWD ಇಲಾಖೆ ಇವತ್ತು ತುರ್ತಾಗಿ ನಮ್ಮೊಂದಿಗೆ ಮಾತುಕತೆಗೆ ಬಂದು ನಮ್ಮ ಎಲ್ಲಾ ಬೇಡಿಕೆಯನ್ನು ಈಡೇರಿಸುವುದಾಗಿ‌ ಭರವಸೆ ನೀಡಿದ್ದು, ದೀಪಾವಳಿ ಹಬ್ಬ ಇರುವುದರಿಂದ ಕಾಮಗಾರಿ ಕೈಗೆತ್ತಿಕೊಳ್ಳಲು ಒಂದು ವಾರದ ಸಮಯ ಕೇಳಿ, ದಿನಾಂಕ 20 /11/23 ರಂದು ಕಾಮಗಾರಿ ಪ್ರಾರಂಭಿಸುತ್ತೇವೆ ಎಂದು ವೇದಿಕೆಯ ಎಲ್ಲಾ ಪದಾಧಿಕಾರಿಗಳು ಮತ್ತು ವಿಶೇಷವಾಗಿ ಹಿರಿಯರ ಸಮ್ಮುಖದಲ್ಲಿ ಭರವಸೆ ಕೊಟ್ಟಿರುವುದರಿಂದ, ನಮ್ಮ ಧರಣಿ ಸತ್ಯಾಗ್ರಹವನ್ನು ತಾತ್ಕಾಲಿಕವಾಗಿ ಮುಂದೂಡಲಾಗಿದೆ.

ಇವತ್ತಿನ ತುರ್ತು ಸಭೆಯಲ್ಲಿ ವೇದಿಕೆಯ ಸಂಚಾಲಕರಾದ ಸಿರಾಜ್ ಹುಸೇನ್ ಬಜ್ಪೆ, ಸಹ ಸಂಚಾಲಕರಾದ
ಇಂಜಿನಿಯರ್ ಇಸ್ಮಾಯಿಲ್, ಹಿರಿಯರಾದ ರಾಜ್ಯ ದಲಿತ ಸಂಘರ್ಷ ಸಮಿತಿಯ ದೇವದಾಸ್ ಮೊನಕ, ಸಲೀಮ್ ಹಾಜಿ, ಮೊಯಿದಿನಕ, ಮುಲ್ಕಿ ಮೂಡಬಿದ್ರೆ ಐಟಿ ಸೆಲ್ ಅಧ್ಯಕ್ಷರಾದ ನಿಸಾರ್ ಕರಾವಳಿ, ಗ್ರಾಮ ಕುಡುಂಬಿ ಸಮಾಜದ ಮುಖಂಡರಾದ ಶೇಖರ್ ಗೌಡ, SSF ಸಂಘಟನೆಯ ಮುಖಂಡರಾದ ಸಲೀಲ್ ಡಿಲಕ್ಸ್ , ಮುಫೀದ್, ಹನೀಫ್ ಕಿನ್ನಿಪದವು, ದಲಿತ ಸಂಘರ್ಷ ಸಮಿತಿಯ ಮಂಜಪ್ಪ ಪುತ್ರನ್, ಉದ್ಯಮಿ ಸಿದ್ದಿಕ್, ಮನ್ಸೂರು ಕರಂಬಾರ್, ಶೇಖರ್ ಎಕ್ಕಾರ್, ಆಟೋ ಸಂಘಟನೆಯ ಭಾಸ್ಕರ್ ಮತ್ತು ಝಕೀರ್, ದಲಿತ ಸಂಘಟನೆಯ ಲಕ್ಷ್ಮೀಶ್, ಗ್ರಾ ಪಂ ಮಾಜಿ ಅಧ್ಯಕ್ಷರುಗಳು, ಸದಸ್ಯರುಗಳು ಮತ್ತು PWD ಇಲಾಖೆಯ ಅಧಿಕಾರಿಗಳು ಮತ್ತು ನಾಗರೀಕ ಹಿತರಕ್ಷಣಾ ಸಮಿತಿಯ ಹಲವಾರು ನಾಯಕರು ಭಾಗವಹಿಸಿದರು.