ಬಿಹಾರದಲ್ಲಿ ಹಲಾಲ್ ಉತ್ಪನ್ನಗಳ ಜಿಹಾದಿಗೆ ನಿಷೇಧ ಹೇರಿ; ನಿತೀಶ್ ಕುಮಾರ್ ರಿಗೆ ಪತ್ರ ಬರೆದ ಕೇಂದ್ರ ಸಚಿವ

0
510

ಸನ್ಮಾರ್ಗ ವಾರ್ತೆ

ಪಟ್ಮಾ: ಬಿಹಾರದಲ್ಲಿ ಹಲಾಲ್ ಉತ್ಪನ್ನಗಳಿಗೆ ನಿಷೇಧ ಹೇರಬೇಕೆಂದು ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ರಿಗೆ ಕೇಂದ್ರ ಗ್ರಾಮಾಭಿವೃದ್ಧಿ ಸಚಿವ ಗಿರಿರಾಜ ಸಿಂಗ್ ಪತ್ರ ಬರೆದಿದ್ದಾರೆ.

ಧಾರ್ಮಿಕವಾಗಿ ಸಂಬಂಧ ಇರುವ ಇಸ್ಲಾಮೀಕರಣ ಮಾಡುವ ಪ್ರಯತ್ನವಾಗಿದೆ ಹಲಾಲ್ ಟ್ಯಾಗ್‍. ಇದು ಸಾಮಾಜಿಕ ತಾರತಮ್ಯಕ್ಕೆ  ಕಾರಣವಾಗುತ್ತದೆ ಎಂದು ಸಚಿವರು ಹೇಳಿದರು. ಹಲಾಲ್ ಸರ್ಟಿಫಿಕೆಟ್ ನೀಡುವ ಸಂಸ್ಥೆಗಳು ಸ್ವಯಂ ಘೋಷಿತ ಅಧಿಕಾರಿಗಳಾಗಿ ಬದಲಾಗುತ್ತಿದ್ದಾರೆ. ಇದಕ್ಕಾಗಿ ಅದನ್ನು ತಯಾರಿಸುವ ಕಂಪೆನಿಯಿಂದ ಅವರು ಹಣ ಪಡೆಯುತ್ತಾರೆ ಎಂದು ಗಿರಿರಾಜ ಸಿಂಗ್ ಹೇಳಿದರು.

ಹಲಾಲ್ ಉತ್ಪನ್ನಗಳ ಹೆಸರಿನಲ್ಲಿ ಜಿಹಾದ್ ಅನ್ನು ನಿಷೇಧಿಸಬೇಕು ಮತ್ತು ಅಂತಹ ವಿಭಜನೆ ಮತ್ತು ಪಿತೂರಿಗಳನ್ನು ಒಪ್ಪಿಕೊಳ್ಳಬಾರದು ಎಂದು ಸಚಿವರು ಹೇಳಿದರು.

ಇತ್ತೀಚೆಗೆ ಉತ್ತರ ಪ್ರದೇಶದಲ್ಲಿ ಹಲಾಲ್ ಉತ್ಪನ್ನಗಳನ್ನು ನಿಷೇಧಿಸಿ ಸರ್ಕಾರ ಆದೇಶ ಹೊರಡಿಸಿದೆ. ವಿವಿಧ ಉತ್ಪನ್ನಗಳಿಗೆ ಹಲಾಲ್ ಪ್ರಮಾಣ ಪತ್ರ ನೀಡಿದ್ದಕ್ಕಾಗಿ ಲಕ್ನೋದಲ್ಲಿ ಬಿಜೆಪಿ ಕಾರ್ಯಕರ್ತನ ದೂರಿನ ಮೇರೆಗೆ ಕಂಪನಿ ಮತ್ತು ಮೂರು ಸಂಘಟನೆಗಳ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಇದರ ನಂತರ ಹಲಾಲ್ ಅನ್ನು ನಿಷೇಧಿಸಲಾಯಿತು. ಈ ನಿಷೇಧ ತಕ್ಷಣದಿಂದಲೇ ಜಾರಿಗೆ ಬರಲಿದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.