“ಹೈದರಾಬಾದಿನ ಪಾಕಿಸ್ತಾನಿಗಳು, ರೋಹಿಂಗ್ಯನ್ನರನ್ನು ಹೊರಹಾಕಲು ಸರ್ಜಿಕಲ್ ಸ್ಟ್ರೈಕ್ ಜಾರಿಗೊಳಿಸಲಾಗುವುದು”- ತೆಲಂಗಾಣ ಬಿಜೆಪಿ ಅಧ್ಯಕ್ಷ

0
562

ಸನ್ಮಾರ್ಗ ವಾರ್ತೆ

ಹೈದರಾಬಾದ್: ತೆಲಂಗಾಣದ ಆಡಳಿತ ಪಕ್ಷ ಟಿಆರ್‍ಎಸ್, ಎಐಎಂಐಎಂ ವಿರುದ್ಧ ಬಿಜೆಪಿ ತೆಲಂಗಾಣ ಅಧ್ಯಕ್ಷ ಮತ್ತು ಸಂಸದ ಬಂದಿ ಸಂಜಯ್ ಕುಮಾರ್ ಕಟುವಾದ ಟೀಕೆ ಮಾಡಿದ್ದಾರೆ. ಹೈದರಾಬಾದಿನ ಮೇಯರ್ ಸ್ಥಾನ ಬಿಜೆಪಿ ಗೆದ್ದರೆ ರೋಹಿಂಗ್ಯನ್ನರನ್ನೂ ಪಾಕಿಸ್ತಾನಿಗಳನ್ನು ಹೊರದಬ್ಬಲು ಸರ್ಜಿಕಲ್ ಸ್ಟ್ರೈಕ್ ಜಾರಿಗೊಳಿಸಲಾಗುವುದು ಎಂದು ಸಂಜಯ್ ಕುಮಾರ್ ಹೇಳಿದರು.

ಗೆಲ್ಲುವ ಭರವಸೆ ಇಲ್ಲದಿದ್ದುದರಿಂದ ಚಂದ್ರ ಶೇಖರ ರಾವ್ ಉವೈಸಿಯೊಂದಿಗೆ ಮೈತ್ರಿ ಮಾಡಿದ್ದಾರೆ. ಉವೈಸಿ ನಿನ್ನೆ ಹೇಳಿದರು, ರೋಹಿಂಗ್ಯನ್ನರು ಹೈದರಾಬಾದಿನಲ್ಲಿದ್ದರೆ ಅಮಿತ್ ಶಾ ಏನು ಮಾಡುತ್ತಾರೆ ಎಂದು. ಬಿಜೆಪಿ ಮೇಯರ್ ಅಭ್ಯರ್ಥಿ ಗೆದ್ದರೆ ಹೈದರಾಬಾದ್ ಓಲ್ಡ್ ಸಿಟಿಯಲ್ಲಿ ಸರ್ಜಿಕಲ್ ಸ್ಟ್ರೈಕ್ ಮಾಡಿ ಪಾಕಿಸ್ತಾನಿಗಳನ್ನು ರೋಹಿಂಗ್ಯನ್ನರನ್ನೂ ಹೊರದಬ್ಬುತ್ತೇವೆ ಎಂದು ಸಂಜಯ್ ಕುಮಾರ್ ಹೇಳಿದರು.

ಡಿಸೆಂಬರ್ ಒಂದಕ್ಕೆ ಗ್ರೇಟರ್ ಹೈದರಾಬಾದ್ ಮುನ್ಸಿಪಲ್ ಕೌನ್ಸಿಲ್ ಚುನಾವಣೆ ನಡೆಯಲಿದೆ. ರೋಹಿಂಗ್ಯನ್ನರು ಮತ್ತು ಪಾಕಿಸ್ತಾನಿಯರು ಅಫ್ಘಾನಿಸ್ತಾನಿಯರು ಇಲ್ಲಿ ಮತದಾರರಾಗಿದ್ದಾರೆ ಎಂದು ಬಿಜೆಪಿ ಆರೋಪಿಸಿದೆ. ತೀವ್ರ ಹಿಂದುತ್ವ ಅಜೆಂಡಾದೊಂದಿಗೆ ಬಿಜೆಪಿ ಚುನಾವಣೆ ಎದುರಿಸುತ್ತಿದೆ.