ಇಸ್ರೇಲಿನಿಂದ ಫೋನ್ ಕದ್ದಾಲಿಕೆ ಉಪಕರಣಗಳನ್ನು ಖರೀದಿಸಿದ ಬಾಂಗ್ಲಾದೇಶ

0
328

ಸನ್ಮಾರ್ಗ ವಾರ್ತೆ

ಢಾಕ: ಇಸ್ರೇಲಿನ ಕಂಪೆನಿ ತಯಾರಿಸಿದ ಫೋನ್ ಹ್ಯಾಕಿಂಗ್ ಉಪಕರಣಗಳನ್ನು ಬಾಂಗ್ಲಾದೇಶ ಖರೀದಿಸಿದ್ದು ವರದಿಯಾಗಿದೆ. ಅಲ್‍ ಜಝೀರ ಚ್ಯಾನೆಲ್ ತನಿಖಾ ವರದಿಯ ತಂಡ ಈ ವಿವರವನ್ನು ಬಹಿರಂಗಪಡಿಸಿದೆ. 3,30,000 ಡಾಲರ್ ಕೊಟ್ಟು ಉಪಕರಣಗಳನ್ನು ಖರೀದಿಸಲಾಗಿದೆ.

ಸೆಲ್ಲೆಬ್ರೈಟ್ ಎಂಬ ಸುರಕ್ಷಾ ಸಂಸ್ಥೆ ಅಭಿವೃದ್ಧಿಗೊಳಿಸಿದ ಉಪಕರಣ ಇದು. ಮೊಬೈಲ್ ಫೋನ್‍ಗಳಿಂದ ಡಾಟ ಕದಿಯಲು ಅವುಗಳನ್ನು ಬೇರೆ ವಿಷಯಗಳಿಗೆ ಉಪಯೋಗಿಸಲು ಇದರಿಂದಾಗುತ್ತದೆ.

ಫೆಲಸ್ತೀನಿಗೆ ಬೆಂಬಲ ನೀಡುವ ಭಾಗವಾಗಿ ಬಾಂಗ್ಲದೇಶ ಇಸ್ರೇಲಿನೊಂದಿಗೆ ಎಲ್ಲ ವ್ಯಾಪಾರ, ಪ್ರಯಾಣ ನಿಷೇಧಿಸಿದೆ. ಎರಡು ದೇಶಗಳ ನಡುವೆ ರಾಜತಾಂತ್ರಿಕ ಸಂಬಂಧ ಇಲ್ಲ. ಉಪಕರಣಗಳನ್ನು ಬಾಂಗ್ಲಾದೇಶ ನೇರವಾಗಿ ಇಸ್ರೇಲಿನ ಕಂಪೆನಿ ಕೊಟ್ಟಿತೇ ಎಂದು ಗೊತ್ತಾಗಿಲ್ಲ. ಸೆಲ್ಲೆಬ್ರೈಟ್ ಸಹಸಂಸ್ಥೆಯ ಮೂಲಕ ಅದು ಈ ಉಪಕರಣಗಳನ್ನು ಪಡೆಯಿತೇ ಎಂಬುದೂ ಸ್ಪಷ್ಟವಾಗಿಲ್ಲ. ಆದರೆ, ಉಪಕರಣಗಳನ್ನು ಹಂಗೇರಿ ತಯಾರಿಸಿದ್ದು ಇದು ವಿಶ್ವಸಂಸ್ಥೆಯ ಕೆಲಸಗಳಿಗಾಗಿ ಖರೀದಿಸಿದ್ದೆಂದು ಬಾಂಗ್ಲಾದೇಶ ರಕ್ಷಣಾ ಸಚಿವಾಲಯ ತಿಳಿಸಿದೆ.