ಕೇರಳ ಗಡಿ ಮುಚ್ಚಿದ್ದು ಸರಿಯಲ್ಲ: ರಾಜ್ಯ ಬಿಜೆಪಿ‌ ಸರ್ಕಾರವನ್ನು ತರಾಟೆಗೆತ್ತಿಕೊಂಡ ಹೈಕೋರ್ಟ್

0
428

ಸನ್ಮಾರ್ಗ ವಾರ್ತೆ

ಬೆಂಗಳೂರು: ಕೇರಳದಲ್ಲಿರವವರಿಗೆ ಕೊರೊನ ಆರ್‌ಟಿಪಿಸಿಆರ್ ನೆಗೆಟಿವ್ ಸರ್ಟಿಫಿಕೆಟ್ ಕಡ್ಡಾಯಗೊಳಿಸಿದ ಆದೇಶದ ನಂತರ ಗಡಿಯನ್ನು ಮುಚ್ಚಿದ ಕರ್ನಾಟಕ ಸರಕಾರ ವಿರುದ್ಧ ಹೈಕೋರ್ಟು ತರಾಟೆಗೆತ್ತಿಕೊಂಡಿದೆ. ದಕ್ಷಿಣ ಕನ್ನಡಜಿಲ್ಲೆ, ಕಾಸರಗೋಡು ಜಿಲ್ಲೆಗಳ ನಡುವೆ 25 ಎಂಟ್ರಿ ಪಾಯಿಂಟುಗಳನ್ನು ಬಂದ್ ಮಾಡಿ, ನಾಲ್ಕು ಗಡಿಗಳಲ್ಲಿ ಮಾತ್ರ ಪ್ರಯಾಣಕ್ಕೆ ಅನುಮತಿಸುವುದು ಯಾವ ಕಾನೂನಿನ ಆಧಾರದಲ್ಲಿ ಎಂದು ಕರ್ನಾಟಕ ಹೈಕೋರ್ಟು ಪ್ರಶ್ನಿಸಿದೆ.

ಇದು ಕೇಂದ್ರ ಸರಕಾರದ ಆದೇಶಗಳಿಗೆ ವಿರುದ್ಧವಾಗಿ ನಡೆದಿದೆ. ಇಂತಹ ಕ್ರಮಗಳು ಶುದ್ಧ ಅಸಂಬದ್ಧವಾಗಿದೆ ಎಂದು ಚೀಫ್ ಜಸ್ಟಿಸ್ ಅಭಯ್ ಶ್ರೀನಿವಾಸ್ ಓಖ, ಜಸ್ಟಿಸ್ ಎಸ್. ವಿಶ್ವಜಿತ್ ಶೆಟ್ಟಿಯವರ ವಿಭಾಗೀಯ ಪೀಠ ಹೇಳಿದೆ.

ಪ್ರಯಾಣ ನಿಯಂತ್ರಣ ಆದೇಶದಲ್ಲಿ ಸಡಿಲಿಕೆ ಮಾಡುವ ಹಿಂದಿನ ನಿಲುವನ್ನು ಬದಲಿಸಿದ ರಾಜ್ಯ ಸರಕಾರ ನಿಯಂತ್ರಣ ಮುಂದುವರಿಯಲಿದೆ ಎಂದು ಮಂಗಳವಾರ ಹೈಕೋರ್ಟಿಗೆ ತಿಳಿಸಿತ್ತು. ಆದರೆ, ನಂತರ ಸರಕಾರ ನೀಡಿದ ಆದೇಶದಲ್ಲಿ ಸಡಿಲಿಕೆ ಅಗತ್ಯವಿಲ್ಲ ಎಂಬ ತೀರ್ಮಾನವನ್ನು ಕೋರ್ಟು ಪ್ರಶ್ನಿಸಿದ್ದು ದಕ್ಷಿಣಕನ್ನಡ ಡೆಪ್ಯುಟಿ ಕಮಿಶನ್‍ರಿಂದ ಸ್ಪಷ್ಟೀಕರಣ ಕೇಳಿದೆ.

ಕೇರಳದಿಂದ ವಿಮಾನದಲ್ಲಿ ಕರ್ನಾಟಕಕ್ಕೆ ಬರುವ ಒಬ್ಬ ವ್ಯಕ್ತಿ ಬೆಂಗಳೂರು ವಿಮಾನ ನಿಲ್ದಾಣಕ್ಕೆ ಮಾತ್ರ ಬರಬಹುದು ಎಂದು ಹೇಳುವುದು ಒಂದು ರಸ್ತೆಯಲ್ಲಿ ಮಾತ್ರ ಪ್ರವೇಶಿಸಬಹುದು ಎಂಬ ಅಧಿಕಾರದಲ್ಲಿ ಹೇಳುವುದೇ ಎಂದು ಹೈಕೋರ್ಟು ಪ್ರಶ್ನಿಸಿತು.