ಗೋಹತ್ಯೆ ನಿಷೇಧದ ವಿರುದ್ಧ ಅರ್ಜಿ: ಸರಕಾರದ ನಿಲುವು ಕೇಳಿದ ಹೈಕೋರ್ಟ್

0
393

ಸನ್ಮಾರ್ಗ ವಾರ್ತೆ

ಬೆಂಗಳೂರು: ರಾಜ್ಯದಲ್ಲಿ ಜಾರಿಗೊಂಡಿರುವ ಗೋಹತ್ಯೆ ನಿಷೇಧ,ಜಾನುವಾರು ರಕ್ಷಣೆ ಸುಗ್ರೀವಾಜ್ಞೆಯ ವಿರುದ್ಧ ಹೈಕೋರ್ಟಿನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಕೆಯಾಗಿದ್ದು, ಈ ಸಂಬಂಧ ಸರಕಾರದ ನಿಲುವನ್ನು ತಿಳಿಸುವಂತೆ ಹೈಕೋರ್ಟ್ ತಿಳಿಸಿದೆ.

ಸುಗ್ರೀವಾಜ್ಞೆಯಿಂದ ಪ್ರಜೆಯ ಆಹಾರ ಹಕ್ಕಿನ ಹರಣವಾಗಿದೆ ಎಂದು ಬೆಂಗಳೂರಿನ ಮುಹಮ್ಮದ್ ಆರಿಫ್ ಜಮೀಲ್ ಹೈಕೋರ್ಟ್ ನಲ್ಲಿ ಸಲ್ಲಿಸಿದ್ದರು. ವಿಧಾನಸಭೆಯಲ್ಲಿ ಈ ಮಸೂದೆ ಪಾಸಾಗಿತ್ತು. ವಿಧಾನ ಪರಿಷತ್‌ ನಲ್ಲಿ ಇದನ್ನು ಮಂಡಿಸಲು ಸಾಧ್ಯವಾಗಿರಲಿಲ್ಲ. ಈ ಹಿನ್ನೆಲೆಯಲ್ಲಿ ಸರಕಾರ ಸುಗ್ರೀವಾಜ್ಞೆ ತಂದಿತ್ತು.

ಗೋವು, ಗೋಸಾಗಾಟ, ಹೋರಿ, 13 ವರ್ಷಕ್ಕಿಂತ ಕಡಿಮೆ ವಯಸ್ಸಿನ ಎಮ್ಮೆಯನ್ನು ಕಡಿಯುವುದು ಮತ್ತು ಮಾರುವುದನ್ನು ನಿಷೇಧಿಸಲಾಗಿದೆ.
13 ವರ್ಷ ಮೇಲ್ಪಟ್ಟ ಎತ್ತುಗಳನ್ನು ವೆಟರ್ನರಿ ಅಧಿಕಾರಿ ಮತ್ತು ಅಧಿಕಾರಿಗಳ ಅನುಮತಿಯೊಂದಿಗೆ ಕಡಿಯಬಹುದಾಗಿದೆ. ಕಾನೂನು ಉಲ್ಲಂಘಿಸುವವರಿಗೆ ಮೂರರಿಂದ ಏಳು ವರ್ಷ ಜೈಲು, ಐವತ್ತು ಸಾವಿರದಿಂದ ಹತ್ತು ಲಕ್ಷದವರೆಗೆ ದಂಡ ವಿಧಿಸಲಾಗುತ್ತದೆ.

ಗೋಹತ್ಯೆ ಸಂಬಂಧ ಹೊರಡಿಸಿರುವ ಸುಗ್ರೀವಾಜ್ಞೆಯು ಪ್ರಜೆಯ ಮೂಲಭೂತ ಹಕ್ಕಿನ ಹರಣ ಮತ್ತು ಸಂವಿಧಾನ ವಿರೋಧಿ ಎಂದು ಅರ್ಜಿದಾರರು ಹೈಕೋರ್ಟ್ ಗೆ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯಲ್ಲಿ ಹೇಳಿದ್ದಾರೆ..