ಹೋರಾಟ ಮಾಡುತ್ತಿರುವವರಿಗೆ ತಮಗೇನು ಬೇಕೆಂಬುದು ಗೊತ್ತಿಲ್ಲ- ರೈತರನ್ನು ಆಕ್ಷೇಪಿಸಿದ ಹೇಮಾ ಮಾಲಿನಿ

0
376

ಸನ್ಮಾರ್ಗ ವಾರ್ತೆ

ಹೊಸದಿಲ್ಲಿ: ಹೋರಾಟ ಮಾಡುತ್ತಿರುವ ರೈತರನ್ನು ಬಿಜೆಪಿ ಸಂಸದೆ ಹೇಮಾ ಮಾಲಿನಿ ಟೀಕಿಸಿದ್ದಾರೆ. ರೈತರಿಗೆ ಕಾನೂನು ಏನು ತೊಂದರೆ ಮಾಡಿದೆ ಎಂದು ಕೇಳಿದ ಹೇಮಾ ಮಾಲಿನಿ ಯಾರದೋ ನಿರ್ದೇಶದಂತೆ ರೈತರು ಹೋರಾಟದಲ್ಲಿದ್ದಾರೆ ಎಂದು ಆರೋಪಿಸಿದ್ದಾರೆ. ಹೋರಾಟ ಮಾಡುವ ರೈತರಿಗೆ ಅವರಿಗೆ ಏನು ಬೇಕೆಂದು ಗೊತ್ತಿಲ್ಲ. ಹೊಸ ಕೃಷಿ ಕಾನೂನುಗಳಲ್ಲಿ ಕೊರತೆ ಏನೆಂದು ಅವರಿಗೆ ಗೊತ್ತಿಲ್ಲ. ಯಾರದೋ ಸೂಚನೆ ಮೇರೆಗೆ ಅವರು ಪ್ರತಿಭಟನೆ ಮಾಡುತ್ತಿದ್ದಾರೆ ಎಂದು ಹೇಮಾ ಮಾಲಿನಿ ಹೇಳಿದರು.

ಹೇಮಾ ಮಾಲಿನಿಯ ಟ್ವೀಟ್‍ಗೆ ಆಮ್ ಆದ್ಮಿ ಉತ್ತರ ನೀಡಿದ್ದು ಗೋಧಿ ಕಟಾವ್ ಮಾಡಿ ನಿಲ್ಲುವ ಹೇಮಾ ಮಾಲಿನಿಯ ಚಿತ್ರದ ಕೆಳಗೆ ಕೃಷಿ ಕಾನೂನಿನ ಅಜ್ಞಾನಿಯಾದ ಏಕೈಕ ರೈತೆ ಎಂದು ಟ್ವೀಟ್ ಮಾಡಿದೆ. ನವೆಂಬರ್ 26ರಿಂದ ದಿಲ್ಲಿ ಗಡಿಯಲ್ಲಿ ಅತೀ ಚಳಿ ಮಳೆಯನ್ನು ಲೆಕ್ಕಿಸದೆ ರೈತರು ಪ್ರತಿಭಟನೆ ನಡೆಸುತ್ತಿದ್ದಾರೆ. ರೈತರ ಹೋರಾಟವನ್ನು ಹಲವು ಬಿಜೆಪಿ ನಾಯಕರು ಇದಕ್ಕಿಂತ ಮೊದಲೂ ಆಕ್ಷೇಪಿಸಿದ್ದಾರೆ.