ರಸ್ತೆ ಹೊಂಡಗಳ ಮೇಲೆ ಗಗನಯಾತ್ರಿ ನಡಿಗೆ ವಿಡಿಯೋ ವೈರಲ್; ಕೊನೆಗೂ ಬಿಬಿಎಂಪಿ ಹೊಂಡಗಳನ್ನು ಮುಚ್ಚಿತು!

0
917

ಬೆಂಗಳೂರು: ರಸ್ತೆಯಲ್ಲಿನ ಹೊಂಡಗಳ ಮೇಲೆ ಗಗನಯಾತ್ರಿಗಳಂತೆ ವೇಷ ಧರಿಸಿ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಟ್ಟ ನಂತರ ಎಚ್ಚೆತ್ತುಕೊಂಡ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯು ರಸ್ತೆಯ ಹೊಂಡಗಳನ್ನು ಮುಚ್ಚಿದೆ.

“ಬಹುಬೇಗ ಪ್ರತಿಕ್ರಿಯಿಸಿ ವಿಡಿಯೋವನ್ನು ಪ್ರಚಾರ ಪಡಿಸಿದ ಜನರಿಗೆಲ್ಲ ಧನ್ಯವಾದಗಳು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯಿಂದ ತತಕ್ಷಣದ ಪ್ರತಿಕ್ರಿಯೆ ಲಭಿಸಿದೆ” ಎಂದು ಮಹಾನಗರ ಪಾಲಿಕೆಯು ಹೊಡಗಳನ್ನು ತುಂಬುತ್ತಿರುವ ಪೋಟೊವನ್ನು ಕಲಾವಿಧ ಶೇರ್ ಮಾಡಿದ್ದಾರೆ.

ಬಾದಲ್ ನಂಜುಡಸ್ವಾಮಿ ಎಂಬ ಕಲಾವಿದ ಗಗನ ಯಾತ್ರಿಯಂತೆ ವೇಷಧರಿಸಿ ಬೆಂಗಳೂರಿನ ಹೊಂಡ ಭರಿತ ರಸ್ತೆಯೊಂದರಲ್ಲಿ ಮೂನ್‌ವಾಕ್ ಎಂಬ 45 ಸೆಕೆಂಡುಗಳ ವಿಡಿಯೋವನ್ನು ಟ್ವಿಟ್ಟರ್‌ನಲ್ಲಿ ಹಲೋ ಬಿಬಿಎಂಪಿ ಎಂದು ಉಲ್ಲೇಖಿಸಿ ಪೋಸ್ಟ್ ಮಾಡಿದ್ದರು. ತದನಂತರ ಈ ವಿಡಿಯೋ ವೈರಲ್ ಆಗಿತ್ತು.

ಬಾದಲ್ ನಂಜುಡಸ್ವಾಮಿ ಈ ಹಿಂದೆ ಹಲವು ಬಾರಿ ರಸ್ತೆಗಳ ಹೊಂಡಗಳನ್ನು ಮುಚ್ಚಲು ಹಾಗೂ ಪಾತ್‌ಹೋಲ್ ಗಳನ್ನು ಸರಿಪಡಿಸಲು ತಮ್ಮ ಕಲೆಯನ್ನು ಉಪಯೋಸುವ ಮೂಲಕ ಬಿಬಿಎಂಪಿ ಗಮನ ಸೆಳೆದಿದ್ದಾರೆ.