68 ದಿವಸಗಳಿಂದ ಪ್ರತಿಭಟಿಸುತ್ತಿದ್ದರೂ ಚರ್ಚೆಗೆ ಬಾರದ ಸರಕಾರ ಇಲ್ಲಿಂದ ಹೊಸ ಸ್ಥಳಕ್ಕೆ ವರ್ಗಾಯಿಸಿದರೆ ಚರ್ಚೆಗೆ ಬರುತ್ತದೆ ಎಂದು ಭಾವಿಸುತ್ತೀರಾ? ಮಧ್ಯಸ್ಥಿಕೆದಾರೊಂದಿಗೆ ಶಾಹೀನ್ ಬಾಗ್ ಪ್ರಶ್ನೆ

0
649

ಸನ್ಮಾರ್ಗ ವಾರ್ತೆ

ಹೊಸದಿಲ್ಲಿ, ಫೆ. 24: ಶಾಹಿನ್ ಬಾಗ್ ಪ್ರತಿಭಟನೆಯನ್ನು ರಸ್ತೆಯಿಂದ ತೆರವುಗೊಳಿಸುವ ವಿಷಯದಲ್ಲಿ ಚರ್ಚಿಸಲು ನಿಯೋಜಿಸಲಾದ ಮಧ್ಯಸ್ಥಿಕೆದಾರರು ಸುಪ್ರೀಂಕೋರ್ಟಿಗೆ ವರದಿ ಸಲ್ಲಿಸಿದ್ದಾರೆ. ಮುದ್ರೆಹಾಕಿದ ಲಕೋಟೆಯಲ್ಲಿ ಸಂಜಯ್ ಹೆಗಡೆ, ಸಾಧನಾ ರಾಮಚಂದ್ರ ವರದಿಯನ್ನು ಸಲ್ಲಿಸಿದರು. ಫೆಬ್ರವರಿ 26ರಂದು ಕೋರ್ಟು ವರದಿಯನ್ನು ವಿಚಾರಣೆಗೆತ್ತಿಕೊಳ್ಳಲಾಗಿದೆ. ಶಾಹಿನ್‍ಬಾಗ್ ಪ್ರತಿಭಟನಕಾರರೊಂದಿಗೆ ನಡೆಸಿದ ಚರ್ಚೆ ಯಶಸ್ವಿಯಾಗಿಲ್ಲ. ಚರ್ಚೆ ನಡೆಸಬೇಕಾದದ್ದು ಸಂಚಾರ ಅಡಚಣೆಯ ಬಗ್ಗೆಯಲ್ಲ, ಪೌರತ್ವ ತಿದ್ದುಪಡಿ ಕಾನೂನು ಕುರಿತು ಎಂದು ಶಾಹೀನ್‍ಬಾಗ್ ಹೋರಾಟಗಾರರು ಮಧ್ಯಸ್ಥಿಕೆದಾರರಿಗೆ ತಿಳಿಸಿದ್ದಾರೆ. ದೇಶಕ್ಕಾಗಿ ಮಹಿಳೆಯರು ಹೋರಾಟ ರಂಗಕ್ಕಿಳಿದು ದೇಶದಲ್ಲೇ ಒಂದು ಮಾದರಿಯಾಗಿ ಶಾಹಿನ್‍ಬಾಗ್ ಪರಿವರ್ತನೆಯಾಗಿದೆ. ಯಾರಿಗೂ ತೊಂದರೆಯಾಗದ ರೀತಿಯಲ್ಲಿ ಪ್ರತಿಭಟನೆಯನ್ನು ಬೇರೆಡೆಗೆ ಬದಲಾಯಿಸಲು ಸಾಧನಾ ರಾಮಚಂದ್ರ ಅಭಿಪ್ರಾಯ ವ್ಯಕ್ತಪಡಿಸಿದ್ದರು. ಈ ಪ್ರತಿಭಟನೆ ಮುಂದುವರಿಯಬೇಕಿದೆ ಎಂದು ನಾವು ಹೇಳುತ್ತೇವೆ. ಪ್ರತಿಭಟನೆಯ ಸ್ಥಳ ಬದಲಿಸುವುದರಿಂದ ಅದು ಕೊನೆಗೊಳ್ಳುವುದೆಂದು ಭಾವಿಸಬೇಕಾಗಿಲ್ಲ ಎಂದಿದ್ದರು.

68 ದಿವಸಗಳಿಂದ ರಸ್ತೆ ತಡೆ ನಿರ್ಮಿಸಿಯೂ ತಿರುಗಿ ನೋಡದ ಸರಕಾರ ಇಲ್ಲಿಂದ ಹೊಸ ಸ್ಥಳಕ್ಕೆ ವರ್ಗಾಯಿಸಿದರೆ ಚರ್ಚೆಗೆ ಬರುತ್ತದೆ ಎಂದು ಭಾವಿಸುತ್ತೀರಾ ಎಂದು ಓರ್ವ ಮಹಿಳೆ ಪ್ರಶ್ನಿಸಿದಾಗ ಮಧ್ಯಸ್ಥಿಕೆದಾರರಲ್ಲಿ ಉತ್ತರ ಇರಲಿಲ್ಲ. ಮೂರು ಸಮಾನಾಂತರ ದಾರಿಯಿದ್ದೂ ಶಾಹಿನ್ ಬಾಗ್ ವಿಷಯದಲ್ಲಿ ಅವೆಲ್ಲವನ್ನೂಪೊಲೀಸರು ಮುಚ್ಚಿಸಿದ್ದೇಕೆ ಎಂದು ಪ್ರತಿಭಟನಾಕಾರರು ಮಧ್ಯಸ್ಥಿಕೆದಾರರನ್ನು ಪ್ರಶ್ನಿಸಿದ್ದರು.