“ಬನ್ನಿ ಇಸ್ಲಾಮಿನ ಜ್ಞಾನ ಗಳಿಸೋಣ” ಅಭಿಯಾನ: ಕಾರ್ಕಳದಲ್ಲಿ ಬಿಐಇ ಕಾರ್ಯಕ್ರಮ

0
267

ಸನ್ಮಾರ್ಗ ವಾರ್ತೆ

ಕಾರ್ಕಳ: ಬೋರ್ಡ್ ಆಫ್ ಇಸ್ಲಾಮಿಕ್ ಎಜುಕೇಶನ್ ಕರ್ನಾಟಕ ಹಮ್ಮಿಕೊಂಡಿರುವ ‘ಬನ್ನಿ ಇಸ್ಲಾಮಿನ ಜ್ಞಾನ ಗಳಿಸೋಣ’ ಅಭಿಯಾನದ ಪ್ರಯುಕ್ತ ಕಾರ್ಕಳದ ಮದೀನಾ ಮಸೀದಿಯ ಸಭಾಂಗಣದಲ್ಲಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜ.ಇ.ಹಿ. ಕಾರ್ಕಳದ ಅಧ್ಯಕ್ಷರಾದ ಜನಾಬ್ ಸಮೀವುಲ್ಲಾ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಉಡುಪಿ ಜಿಲ್ಲಾ ಸಂಚಾಲಕರಾದ ಅಬ್ದುಲ್ ಅಝೀಝ್ ಶಿಕ್ಷಣದ ಪ್ರಾಮುಖ್ಯತೆ ಹಾಗೂ ಜವಾಬ್ದಾರಿಗಳ ಕುರಿತು ಮನೋಜ್ಞವಾಗಿ ವಿದ್ಯಾರ್ಥಿ ಮತ್ತು ಪೋಷಕರಿಗೆ ಮನವರಿಕೆ ಮಾಡಿಸಿದರು.

ಜ.ಇ.ಹಿಂದ್ ಕಾರ್ಯಕರ್ತೆ ಶಬಾನಾರವರ ನೇತ್ರತ್ವದಲ್ಲಿ ಹನ್ನೆರಡು ವರ್ಷದ ಕೆಳಗಿನ 80ಕ್ಕೂ ಹೆಚ್ಚು ಮಕ್ಕಳಿಗೆ ವಿವಿಧ ಸ್ಪರ್ಧೆಗಳನ್ನು ಹಮ್ಮಿಕೊಳ್ಳಲಾಗಿತ್ತು. ಅಪರಾಹ್ನ ಸಭಾ ಕಾರ್ಯಕ್ರಮವು ಹನಾನ್ ಅವರ ಕುರ್‌ಆನ್ ಪಠಣದೊಂದಿಗೆ ಆರಂಭವಾಯಿತು. ಕುರ್‌ಆನ್ ಬೋಧನೆಯನ್ನು ಜ.ಇ.ಹಿಂದ್ ಸದಸ್ಯೆ ಫರೀನ ನೆರವೇರಿಸಿದರು. ರೇಷ್ಮಾರವರು ಪ್ರಾಸ್ತಾವಿಕ ನುಡಿಗಳನ್ನು ನುಡಿದರು. ಬಿಐಇ ಹೊಣೆಗಾರರಾದ ರಿಹಾನಾರವರು ಅಭಿಯಾನ ಮತ್ತು ಬೋರ್ಡ್‌ನ ಪರಿಚಯ ಮಾಡಿದರು.

ಇದೇ ವೇಳೆ, ಬಿಐಇ-2021-22 ಸಾಲಿನ ತೇರ್ಗಡೆಗೊಂಡ ವಿದ್ಯಾರ್ಥಿ-ವಿದ್ಯಾರ್ಥಿನಿಯರಿಗೆ ಅತಿಥಿಗಳು ಪ್ರಮಾಣಪತ್ರ ವಿತರಿಸಿದರು. ರಾಜ್ಯ ಮಟ್ಟದ ರ್ಯಾಂಕ್ ಪಡೆದ ವಿದ್ಯಾರ್ಥಿಗಳನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು. ಸ್ಪರ್ಧೆಗಳಲ್ಲಿ ವಿಜೇತರಾದ ಮಕ್ಕಳಿಗೆ ಬಹುಮಾನವನ್ನು ಸಮೀವುಲ್ಲಾರವರು ನೀಡಿದರು. ಅನ್ಸಿಫಾ(ಜಿಐಒ)ಅವರು ಕಾರ್ಯಕ್ರಮ ನಿರೂಪಣೆಗೈದರು. ಜ.ಇ.ಹಿಂ ಮಹಿಳಾ ವಿಭಾಗದ ಸಂಚಾಲಕಿ ತನ್ವೀರ್ ರವರು ಕೊನೆಯಲ್ಲಿ ಸರ್ವರಿಗೂ ಧನ್ಯವಾದವಿತ್ತರು.