ಸನ್ಮಾರ್ಗ ವಾರ್ತೆ
ತೊಕ್ಕೊಟ್ಟು: ಇಲ್ಲಿನ ಸ್ಮಾರ್ಟ್ ಸಿಟಿ ಪಕ್ಕದ ಸ್ಮಾರ್ಟ್ ಪ್ಲಾನೆಟ್ ನಲ್ಲಿ ಇಂದು ಕ್ಲೀನಿಂಗ್ ಸಾಮಗ್ರಿಗಳುಳ್ಳ ಬಿಗ್ ಸ್ಟೋರ್ ಮಾರಾಟ ಮಳಿಗೆಯನ್ನು ಉಳ್ಳಾಲ ಭಗವತಿ ಕ್ಷೇತ್ರದ ಚಂದ್ರಹಾಸ್ ಮತ್ತು ಉಳ್ಳಾಲ ಸೈಯದ್ ಮದನಿ ದರ್ಗಾದ ಅಧ್ಯಕ್ಷ ಹಾಜಿ ಅಬ್ದುಲ್ ರಶೀದ್ ಅವರು ಜೊತೆಯಾಗಿ ಉದ್ಘಾಟಿಸಿ ಶುಭಕೋರಿದರು.
ಮನೆ, ಕಚೇರಿ, ಆಸ್ಪತ್ರೆ ಮಸೀದಿ, ಮಂದಿರ ಸಹಿತ ಎಲ್ಲದರ ಸ್ವಚ್ಛತೆಗೆ ಬೇಕಾಗುವ ಎಲ್ಲಾ ಸಾಮಗ್ರಿಗಳು ಒಂದೇ ಕಡೆ ಸಿಗುವ ಮಳಿಗೆ ಇದಾಗಿದ್ದು, ಆಧುನಿಕ ತಂತ್ರಜ್ಞಾನವನ್ನು ಬಳಸಿ ಸ್ವಚ್ಛಗೊಳಿಸಿಕೊಡುವುದಕ್ಕೆ ಬೇಕಾದ ವ್ಯವಸ್ಥೆಯೂ ಇಲ್ಲಿದೆ. ಮನೆ, ಮನೆಯ ಸೋಫಾ, ಶೌಚಾಲಯ, ಅಡುಗೆ ಕೋಣೆ, ನೆಲ ಸಹಿತ ಎಲ್ಲವನ್ನೂ ಸ್ವಚ್ಛಗೊಳಿಸಿ ಕೊಡುವ ವ್ಯವಸ್ಥೆಯೂ ಇದೆ. ಅದಕ್ಕೆ ಬೇಕಾದ ಸಾಮಗ್ರಿಗಳನ್ನು ಮಳಿಗೆಯಲ್ಲಿ ಮಾರಾಟ ಮಾಡಲಾಗುತ್ತದೆ ಎಂದು ಮಾಲಕ ಅಬ್ದುಲ್ ಹಮೀದ್ ಅವರು ತಿಳಿಸಿದರು. ಪಾಲುದಾರರಾದ ಶಂಶೀರ್ ಮತ್ತು ಹುಸೇನ್ ಅಹ್ಮದ್ ಅವರೂ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಕ್ಲೀನಿಂಗ್ ಗೆ ಬೇಕಾದ ಎಲ್ಲಾ ಸಾಮಗ್ರಿಗಳು ಒಂದೇ ಕಡೆ ಸಿಗುವ ಮಳಿಗೆ ಇದು ಎಂದು ಅವರು ಈ ಸಂದರ್ಭದಲ್ಲಿ ಪ್ರಾತ್ಯಕ್ಷಿಕೆಯ ಮೂಲಕ ವಿವರಿಸಿದರು.
ಟಾಯ್ಲೆಟ್ ಕ್ಲೀನಿಂಗ್, ಅಡುಗೆ ಕೋಣೆ, ನೆಲ ಇತ್ಯಾದಿಗಳ ಕ್ಲೀನಿಂಗ್ ಬಗ್ಗೆ ಜನರಲ್ಲಿ ಮಾಹಿತಿಯ ಕೊರತೆ ಇದ್ದು ತಪ್ಪಾದ ಸಾಮಗ್ರಿಗಳನ್ನು ಬಳಸುತ್ತಿದ್ದಾರೆ. ಇದರಿಂದಾಗಿ ಅವುಗಳ ಹೊಳಪು ಕಳೆಗುಂದುತ್ತದೆ. ಬಿಗ್ ಸ್ಟೋನ್ ಮಳಿಗೆಯಲ್ಲಿ ಈ ಬಗ್ಗೆ ವಿವರವನ್ನು ಪಡೆದು ಸೂಕ್ತ ಸಾಮಗ್ರಿಗಳನ್ನು ಕೊಡುವ ಮತ್ತು ಮನೆಗೆ ಬಂದು ಪರಿಶೀಲಿಸಿ, ಸೂಕ್ತವಾದವುಗಳನ್ನು ಸ್ವಯಂ ತಯಾರಿಸಿ ಕೊಡುವ ವ್ಯವಸ್ಥೆ ಇದೆ. ಈ ಕ್ಷೇತ್ರದಲ್ಲಿ 25 ವರ್ಷಗಳ ಅನುಭವ ಇದ್ದು, ಇದು ತನ್ನ ಎರಡನೇ ಮಳಿಗೆ ಎಂದವರು ಹೇಳಿದರು.
ಮೌಲಾನಾ ಯಹ್ಯಾ ತಂಙಳ್ ಮದನಿ, ಅಬ್ದುಲ್ ಕರೀಂ ಉಳ್ಳಾಲ, ಏ ಕೆ ಕುಕ್ಕಿಲ ಶುಭ ಹಾರೈಸಿದರು. ವೇದಿಕೆಯಲ್ಲಿ ಯು.ಕೆ.ಸಿದ್ದೀಕ್, ಇಬ್ರಾಹೀಮ್ ದಾರಿಮಿ ಉಪಸ್ಥಿತರಿದ್ದರು. ಮುಝಮ್ಮಿಲ್ ಕಾರ್ಯಕ್ರಮ ನಿರೂಪಿಸಿದರು. ಮಾಸ್ಟರ್ ಫೌಝುಲ್ ಹಸನ್ ಕುರ್ ಆನ್ ಪಠಿ ಸಿದರು. ಎಲ್ಲರಿಗೂ ಸ್ಮರಣಿಕೆಯನ್ನು ನೀಡಲಾಯಿತು.

















