ಆಧಾರ್-ಪಾನ್ ಕಾರ್ಡ್‌ ಲಿಂಕ್: ಜೂನ್ 30ರವರೆಗೆ ಅವಧಿ ವಿಸ್ತರಣೆ

0
684

ಸನ್ಮಾರ್ಗ ವಾರ್ತೆ

ನವದೆಹಲಿ: ಕೋವಿಡ್ 19 ಸಾಂಕ್ರಾಮಿಕ ರೋಗದಿಂದ ಉಂಟಾಗಿರುವ ತೊಂದರೆಗಳನ್ನು ಗಮನದಲ್ಲಿಟ್ಟುಕೊಂಡು ಕೇಂದ್ರ ಸರ್ಕಾರವು 2021ರ ಮಾರ್ಚ್ 31 ರಿಂದ 2021ರ ಜೂನ್ 30ರವರೆಗೆ ಆಧಾರ್ ಸಂಖ್ಯೆಯನ್ನು ಪಾನ್‌ನೊಂದಿಗೆ ಜೋಡಿಸುವ ಕೊನೆಯ ದಿನಾಂಕವನ್ನು ವಿಸ್ತರಿಸಿದೆ.

ಈ ಮೊದಲು ಮಾರ್ಚ್ 31, 2021ರೊಳಗೆ ಆಧಾರ್ ಕಾರ್ಡ್ – ಪ್ಯಾನ್ ಕಾರ್ಡ್‌ ಲಿಂಕ್ ಮಾಡುವಂತೆ ಕೇಂದ್ರ ಸರ್ಕಾರವು ಸೂಚಿಸಿತ್ತು. ಈ ಹಿನ್ನೆಲೆಯಲ್ಲಿ ಆಧಾರ್‌ನೊಂದಿಗೆ ಪ್ಯಾನ್ ಲಿಂಕ್ ಮಾಡಲು ಆದಾಯ ತೆರಿಗೆ ವೆಬ್‌ಸೈಟ್‌ಗೆ ಪ್ರವೇಶಿಸಲು ಸಾವಿರಾರು ಜನರು ಪ್ರಯತ್ನಿಸುತ್ತಿದ್ದರು. ಆ ಕಾರಣ ವೆಬ್ ಸೈಟ್ ಸರ್ವರ್ ಗೆ ಲೋಡ್ ಜಾಸ್ತಿಯಾಗಿತ್ತು. ವೆಬ್ ಸೈಟ್ ಗೆ ಪ್ರವೇಶಿಸಲಾಗುತ್ತಿಲ್ಲ ಎಂದು ದೂರಿದ್ದರು. ಅವಧಿ ವಿಸ್ತರಿಸಿರುವ ಮಾಹಿತಿಯನ್ನು ಇಂಕಮ್ ಟ್ಯಾಕ್ಸ್ ಇಲಾಖೆಯ ಅಧಿಕೃತ ಟ್ವಿಟ್ಟರ್ ಖಾತೆಯಲ್ಲಿ ಮಾಹಿತಿ ನೀಡಲಾಗಿದೆ.