ಸನ್ಮಾರ್ಗ ವಾರ್ತೆ
ಪಟ್ನಾ: 50 ನೇ ವಯಸ್ಸಿನಲ್ಲಿ ಸರಕಾರಿ ಉದ್ಯೋಗಸ್ಥರು ನಿವೃತ್ತಿ ಹೊಂದಬೇಕೆಂದು ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಆದೇಶ ಹೊರಡಿಸಿದ ಬೆನ್ನಲ್ಲೇ ಆರ್.ಜೆ.ಡಿ ನಾಯಕ ಮಹಾಮೈತ್ರಿ ಕೂಟದ ಮುಖ್ಯಮಂತ್ರಿ ಅಭ್ಯರ್ಥಿಯೂ ಆಗಿರುವ ತೇಜಸ್ವಿ ಯಾದವ್ ತಾನು ಅಧಿಕಾರಕ್ಕೆ ಬಂದರೆ ಸರಕಾರಿ ಉದ್ಯೋಗಿಗಳ ನಿವೃತ್ತಿ ವಯಸ್ಸು ಹೆಚ್ಚಿಸುತ್ತೇನೆ ಎಂದು ಹೇಳಿದ್ದಾರೆ.
“50 ವರ್ಷ ಪ್ರಾಯವಿರುವ ಸರಕಾರಿ ಉದ್ಯೋಗಿಗಳು ನಿವೃತ್ತಿ ಹೊಂದಬೇಕೆಂದು ಆಗ್ರಹಿಸಿ ನಿತೀಶ್ ಕುಮಾರ್ ಆದೇಶ ಹೊರಡಿಸಿದ್ದರು. ಆದರೆ ನಿತೀಶ್ ಕುಮಾರ್ರಿಗೆ 70 ವಯಸ್ಸಾಗಿದೆ. ಹಾಗಾದರೆ ಈ ಬಾರಿ ನಾಗರಿಕರೇ ಅವರನ್ನು ನಿವೃತ್ತಿಗೊಳಿಸುವ ತಯಾರಿಯಲ್ಲಿದ್ದಾರೆ. ನಮ್ಮ ಸರಕಾರ ರೂಪೀಕರಣಗೊಂಡಲ್ಲಿ ನಿವೃತ್ತಿ ವಯಸ್ಸು ಹೆಚ್ಚಿಸುತ್ತೇನೆ.” ಎಂದು ತೇಜಸ್ವಿ ಯಾದವ್ ತಿಳಿಸಿದರು.
ಬಿಹಾರದ ಉನ್ನತ ವಿದ್ಯಾಭ್ಯಾಸ ಸಂಪ್ರದಾಯದ ಕೆಟ್ಟ ಪರಿಸ್ಥಿತಿಯನ್ನು ಸಂಬಂಧಿಸಿದ ವಿಷಯದಲ್ಲೂ ನಿತೀಶ್ ವಿರುದ್ಧ ಯಾದವ್ ವಾಗ್ದಾಳಿ ನಡೆಸಿದ್ದಾರೆ. ಅಂಡರ್ ಗ್ರಾಜುಯೇಶನ್ ಪೂರ್ತಿಗೊಳಿಸಲು ಮೂರು ವರ್ಷಕ್ಕಿಂತ ಹೆಚ್ಚು ಕಾಲ ಯಾಕೆ ತೆಗೆದುಕೊಳ್ಳುತ್ತಿದೆ ಎಂದು ತೇಜಸ್ವಿ ಪ್ರಶ್ನಿಸಿದ್ದಾರೆ. ಇದು ನಾಲ್ಕರಿಂದ ಐದು ವರ್ಷಗಳ ಕಾಲ ಯಾಕಾಗಿ ಧೀರ್ಘಗೊಳ್ಳುತ್ತಿರುವುದು ಯಾಕೆಂದು ನಿತೀಶ್ ಕುಮಾರ್ ವ್ಯಕ್ತಪಡಿಸಬೇಕೆಂದು ತೇಜಸ್ವಿ ಸವಾಲೆಸೆದಿದ್ದಾರೆ.
ಬಿಹಾರದಲ್ಲಿ ಎರಡನೇ ಹಂತದ ಚುನಾವಣೆ ನವಂಬರ್ 3 ನೇ ತಾರೀಖು ಮತ್ತು ನವೆಂಬರ್ 7 ರಂದು ಮೂರನೇ ಹಂತದ ಚುನಾವಣೆ ನಡೆಯಲಿದೆ. ನವೆಂಬರ್ 10 ರಂದು ಫಲಿತಾಂಶ ಹೊರಬರಲಿದೆ.












