ವಾಹನ ಮಾರಾಟ ಮಾಡುವಾಗ ಎಚ್ಚರ! ಹೀಗೂ ಆಗಬಹುದು

0
272

ಸನ್ಮಾರ್ಗ ವಾರ್ತೆ 

ಅಬುಧಾಬಿ: ಯುಎಇಯಲ್ಲಿ ಸ್ವಾರಸ್ಯಕರವಾದ ಘಟನೆ ನಡೆದಿದೆ. 7000 ದಿರ್ ಹಮ್ ಗೆ ಕಾರನ್ನು ಖರೀದಿಸಿದ್ದ ವ್ಯಕ್ತಿ ಇದೀಗ 80000 ದಿರ್ಹಮ್ ದಂಡ ಕಟ್ಟಬೇಕಾದ ಸಂದಿಗ್ಧ ಸ್ಥಿತಿಗೆ ತಲುಪಿರುವ ಸುದ್ದಿ ಯುಎಇ ಯಿಂದ ವರದಿಯಾಗಿದೆ . ಆತ ಕಾರು ಖರೀದಿಸಿದ್ದರೂ ಕಾರಿನ ಮಾಲಕತ್ವವನ್ನು ತನ್ನ ಹೆಸರಿಗೆ ವರ್ಗಾಯಿಸಿ ಕೊಂಡಿರಲಿಲ್ಲ. ಈ ಅಸಡ್ಡೆಯೇ ಇದೀಗ ಆತನನ್ನು ಕಂಗಾಲಾಗುವಂತೆ ಮಾಡಿದೆ.

ತಾನು ಮಾರಿದ ಕಾರು ಅನೇಕ ಬಾರಿ ನಿಯಮ ಉಲ್ಲಂಘನೆಗಳನ್ನು ಮಾಡಿದ್ದು ಅದರ ದಂಡವನ್ನು ಕಾರು ಖರೀದಿಸಿದ ವ್ಯಕ್ತಿಯಿಂದಲೇ ವಸೂಲು ಮಾಡಬೇಕು ಎಂದು ಕಾರಿನ ಮೂಲ ಮಾಲಕ ನ್ಯಾಯಾಲಯದ ಮೊರೆ ಹೋಗಿದ್ದ. ತಾನು 7000 ದಿರ್ಹಮ್ ಗೆ ಕಾರನ್ನು ಮಾರಾಟ ಮಾಡಿದ್ದೇನೆ. ಆದರೆ ಕಾರು ಖರೀದಿಸಿದ ವ್ಯಕ್ತಿ ನಿಯಮ ಉಲ್ಲಂಘನೆಯ ದಂಡವನ್ನು ಪಾವತಿಸುತ್ತಿಲ್ಲ. ಆದ್ದರಿಂದ ತಾನು ನ್ಯಾಯಾಲಯಕ್ಕೆ ದೂರು ಸಲ್ಲಿಸಿದ್ದೇನೆ ಎಂದು ಮಾಲಕ ತಿಳಿಸಿದ್ದಾನೆ. ಯುಎಯಿ ನಿಯಮ ಪ್ರಕಾರ ಕಾರು ಮಾರಾಟ ಮಾಡಿದ 14 ದಿನಗಳ ಒಳಗೆ ಮಾಲಕತ್ವವನ್ನು ಖರೀದಿದಾರನಿಗೆ ವರ್ಗಾಯಿಸ ಬೇಕಾಗಿದೆ. ಈ 14 ದಿನಗಳೊಳಗೆ ಕಾರಿಗೆ ಸಂಬಂಧಿಸಿದ ಯಾವೆಲ್ಲ ದಂಡ ಗಳಿವೆಯೋ ಅವನ್ನು ಮಾಲಕನೇ ಪಾವತಿಸಬೇಕಾಗಿದೆ . ಪ್ರಕರಣವನ್ನು ಆಲಿಸಿದ ನ್ಯಾಯಾಲಯ ಮೂಲ ಮಾಲಕನ ವಾದವನ್ನು ಒಪ್ಪಿಕೊಂಡಿದೆ ಮತ್ತು ಈ ನಡುವೆ ಕಾರು ಖರೀದಿಸಿದಾತ 80000 ದಿರ್ಹಮ್ ದಂಡ ಪಾವತಿಸಿ ರುವುದಾಗಿ ತಿಳಿದ ಬಳಿಕ ಪ್ರಕರಣವನ್ನು ಮುಕ್ತಾಯಗೊಳಿಸಿದೆ.