2024ರ ಚುನಾವಣೆಯಲ್ಲಿ ಸೋಲುವುದು ಬಿಜೆಪಿಗೆ ಅರಿವಾಗಿದೆ- ಅರವಿಂದ್ ಕೇಜ್ರಿವಾಲ್

0
225

ಸನ್ಮಾರ್ಗ ವಾರ್ತೆ

ಹೊಸದಿಲ್ಲಿ, ಅ.4: ಆಮ್ ಆದ್ಮಿ ನಾಯಕ ಸಂಜಯ್ ಸಿಂಗ್ ಮನೆಗೆ ಇಡಿ ದಾಳಿ ನಡೆಸಿದ್ದಕ್ಕೆ ಪ್ರತಿಕ್ರಿಯಿಸಿದ ದಿಲ್ಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ 2024ರ ಚುನಾವಣೆಯಲ್ಲಿ ಬಿಜೆಪಿಗೆ ಸೋಲುವ ವಿಷಯ ಅರಿವಾಗಿದೆ ಎಂದು  ಹೇಳಿದರು.

ಅರವಿಂದ್ ಕೇಜ್ವಾಲ್, “ಸಂಜಯ್ ಸಿಂಗ್ ಅವರ ಮನೆಯಿಂದ ಏನೂ ಸಿಗುವುದಿಲ್ಲ. 2024 ರ ಚುನಾವಣೆಯಲ್ಲಿ ಬಿಜೆಪಿ ಸೋಲುತ್ತದೆ ಎಂದು ತಿಳಿದಿದೆ. ಇದು ಅವರ ಹತಾಶ ಪ್ರಯತ್ನವಾಗಿದೆ. ಚುನಾವಣೆಗಳು ಹತ್ತಿರದಲ್ಲಿವೆ ಮತ್ತು ಇಡಿ ಮತ್ತು ಸಿಬಿಐ ಹೆಚ್ಚು ಸಕ್ರಿಯವಾಗಿರುತ್ತದೆ” ಎಂದು ಹೇಳಿದರು.

ಸಂಜಯ್ ಸಿಂಗ್ ಅವರು ಮೋದಿ ಮತ್ತು ಅದಾನಿ ವಿರುದ್ಧ ನಿರಂತರವಾಗಿ ಪ್ರಶ್ನೆಗಳನ್ನು ಕೇಳುತ್ತಿದ್ದರಿಂದ ಇಡಿ ದಾಳಿ ನಡೆಸಿದೆ ಎಂದು ಆಮ್ ಆದ್ಮಿ ಪಕ್ಷದ ವಕ್ತಾರೆ ರೀನಾ ಗುಪ್ತಾ ಹೇಳಿದ್ದಾರೆ. ಇಡಿ ನಿರ್ದೇಶಕರು ಮತ್ತು ಸಹಾಯಕ ನಿರ್ದೇಶಕರು ಆಧಾರ ರಹಿತ ಆರೋಪ ಮಾಡುತ್ತಿದ್ದಾರೆ ಎಂದು ಮಾಜಿ ಹಣಕಾಸು ಕಾರ್ಯದರ್ಶಿ ಟಿವಿ ಸೋಮನಾಥ್ ಅವರಿಗೆ ಬರೆದ ಪತ್ರದಲ್ಲಿ ಸಂಜಯ್ ಸಿಂಗ್ ಹೇಳಿದ್ದಾರೆ.

ಅದೇ ಸಮಯದಲ್ಲಿ, ಸಂಜಯ್ ಸಿಂಗ್ ವಿರುದ್ಧದ ಇಡಿ ತನಿಖೆಯ ನಂತರ, ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ರಾಜೀನಾಮೆಗೆ ಒತ್ತಾಯಿಸುವ ಬೋರ್ಡ್‌ಗಳೊಂದಿಗೆ ಬಿಜೆಪಿ ಮುಂದೆ ಬಂದಿದೆ. ಮುಂದಿನ ದಿನಗಳಲ್ಲಿ ಎಎಪಿ ಕೇಂದ್ರ ಕಚೇರಿಯ ಹೊರಗೆ ಪ್ರತಿಭಟನೆ ನಡೆಸುವುದಾಗಿಯೂ ಬಿಜೆಪಿ ಹೇಳಿದೆ.