ಎಲ್‍ಜಿಪಿ ಸಬ್ಸಿಡಿ ಹೆಚ್ಚಳ; ಪ್ರಧಾನ ಮಂತ್ರಿ ಉಜ್ವಲ ಯೋಜನೆಯ ಫಲಾನುಭವಿಗಳಿಗೆ ಲಾಭ

0
410

ಸನ್ಮಾರ್ಗ ವಾರ್ತೆ

ನವದೆಹಲಿ: ಪ್ರಧಾನ ಮಂತ್ರಿ ಉಜ್ವಲ ಯೋಜನೆಯಡಿ ಅಡುಗೆ ಅನಿಲ ಸಂಪರ್ಕ ಪಡೆದವರಿಗೆ ಕೇಂದ್ರ ಸರ್ಕಾರ ಸಬ್ಸಿಡಿಯನ್ನು ಹೆಚ್ಚಿಸಿದೆ. ಸಬ್ಸಿಡಿಯನ್ನು 200 ರೂ.ನಿಂದ 300 ರೂ.ಗೆ ಹೆಚ್ಚಿಸಲಾಗಿದೆ. ಸಂಪುಟದ ನಿರ್ಧಾರಗಳನ್ನು ವಿವರಿಸುವಾಗ ಕೇಂದ್ರ ಸಚಿವ ಅನುರಾಗ್ ಠಾಕೂರ್ ಅವರು ಇದನ್ನು ಘೋಷಿಸಿದರು.

ಪ್ರಸ್ತುತ, ಪ್ರಧಾನ ಮಂತ್ರಿ ಉಜ್ವಲ ಯೋಜನೆಯ ಫಲಾನುಭವಿಗಳು 14.2 ಕೆಜಿ ಸಿಲಿಂಡರ್‌ಗೆ 703 ರೂ. ಬದಲಿಗೆ ಇನ್ನು ಮುಂದೆ 603 ಪಾವತಿಸಿದರೆ ಸಾಕು. ಈ ತಿಂಗಳು ಗೃಹ ಬಳಕೆಗೆ ಸಿಲಿಂಡರ್‌ಗೆ 200 ರೂ. ಕಡಿಮೆ ಮಾಡಿದ್ದು, ಗ್ರಾಮೀಣ ಪ್ರದೇಶದ ನಿರ್ಗತಿಕ ಕುಟುಂಬಗಳು ಕಟ್ಟಿಗೆ ಬದಲು ಎಲ್‌ಪಿಜಿ ಬಳಸುವುದನ್ನು ಅಭ್ಯಾಸ ಮಾಡುವ ಉದ್ದೇಶದಿಂದ ಉಜ್ವಲ ಯೋಜನೆಯನ್ನು ಜಾರಿಗೊಳಿಸಲಾಗಿತ್ತು.

ಉಜ್ವಲ ಯೋಜನೆಯ ಮೂಲಕ ಕಟ್ಟಿಗೆ ಸುಡುವುದರಿಂದ ಉಂಟಾಗುವ ಮಾಲಿನ್ಯವನ್ನು ತಪ್ಪಿಸುವುದು ಮತ್ತು ಕಾಡಿನೊಳಗೆ ಹೋಗುವುದರಿಂದ ಉಂಟಾಗುವ ಅಪಾಯಗಳನ್ನು ಕಡಿಮೆ ಮಾಡುವುದು ಸರ್ಕಾರದ ಗುರಿಯಾಗಿದೆ.