ಜೈಶ್ರೀರಾಮ್ ಬ್ಯಾನರ್ ಹಾಕಿದ್ದು ತಪ್ಪು, ನಾಯಕತ್ವದಲ್ಲಿ ಲೋಪವಾಗಿದೆ: ಕೇರಳ ಬಿಜೆಪಿ ನಾಯಕ

0
582

ಸನ್ಮಾರ್ಗ ವಾರ್ತೆ

ಪಾಲಕ್ಕಾಡ್: ಕೇರಳದ ಪಾಲಕ್ಕಾಡ್ ನಗರಸಭೆಯಲ್ಲಿ ಜೈಶ್ರೀರಾಮ್ ಬ್ಯಾನರ್ ಹಾಕಿದ್ದಕ್ಕೆ ಬಿಜೆಪಿಯೊಳಗೆಯೇ ಅಸಮಾಧಾನ ಸ್ಫೋಟವಾಗಿದೆ. ಹೀಗೆ ನಡೆದಿದ್ದು ಪ್ರಮಾದವಾಗಿದ್ದು, ಕಾರ್ಯಕರ್ತರ ಆವೇಶವನ್ನು ಸಂಘಟನೆಯಲ್ಲಿ ಕೆಲಸ ಮಾಡುವುದಕ್ಕೆ ನಾಯಕರು ಉಪಯೋಗಿಸಬೇಕೆಂಬ ಟೀಕೆ ವ್ಯಕ್ತವಾಗಿದೆ.

ಪಾಲಕ್ಕಾಡ್ ಬಿಜೆಪಿ ಕಾರ್ಯಕರ್ತರ ಮಿತಿಮೀರಿದ ವರ್ತನೆ ನಾಯಕತ್ವದ ಕೂಡ ಲೋಪವಾಗಿದೆ. ನಾಯಕರು ಆತ್ಮಾವಲೋಕನಕ್ಕೆ ತಯಾರಾಗಬೇಕು ಎಂದು ಬಿಜೆಪಿಯ ಹಿರಿಯ ನಾಯಕ ಬಿ. ರಾಧಾಕೃಷ್ಣನ್‍ ಮೆನೊನ್ ಹೇಳಿದ್ದಾರೆ.

ಸ್ಥಳೀಯಾಡಳಿತ ಚುನಾವಣೆಯಲ್ಲಿ ಪಾರ್ಟಿಗೆ ನಿರೀಕ್ಷಿತ ಗೆಲುವು ಸಿಕ್ಕಿಲ್ಲ. ಸಂಘಟನಾ ವ್ಯವಸ್ಥೆಯಲ್ಲಿ ಲೋಪವೂ ಇದೆ ಎಂದು ರಾಧಾಕೃಷ್ಣನ್ ತಮ್ಮ ಪಕ್ಷದವರನ್ನೇ ಟೀಕೆಗೆ ಗುರಿ ಮಾಡಿದ್ದಾರೆ.

ದೊಡ್ಡ ಮಟ್ಟದ ಗೆಲುವು ಸಿಗದೆ ಇದ್ದರೂ ಕೂಡಾ ಅಪಕ್ವವಾದ ಆಚರಣೆ ಮಾಡಿದ್ದಾರೆ. ಸಮಿತಿ ಸಭೆ ಕೂಡ ಸೇರದೆ ಚುನಾವಣೆ ಎದುರಿಸಲಾಯಿತು. ಕೋಟ್ಟಾಯಂ ಜಿಲ್ಲಾ ಅಧ್ಯಕ್ಷರ ಸಹಿತ ಕೆಲವರು ಚುನಾವಣೆಯನ್ನು ಗಂಭೀರವಾಗಿ ಪರಿಗಣಿಸಿರಲಿಲ್ಲ ಎಂದು ಹೇಳಿರುವ ಅವರು, ಪಾಲಕ್ಕಾಡ್ ನ ಘಟನೆ ನಡೆದದ್ದು ತಪ್ಪು ಎಂದು ಬೊಟ್ಟು ಮಾಡಿದ್ದಾರೆ‌.

ಚುನಾವಣಾ ಫಲಿತಾಂಶ ಬಂದ ಬಳಿಕ ಪಾಲಕ್ಕಾಡ್ ನ ಬಿಜೆಪಿ ಕಾರ್ಯಕರ್ತರು ಪಾಲಕ್ಕಾಡ್ ನಗರಸಭೆಯ ಕಟ್ಟಡದ ಮೇಲೇರಿ ಜೈ ಶ್ರೀರಾಮ್ ಎಂದು ಬರೆದದ್ದ ಫ್ಲೆಕ್ಸ್ ಹಾಗೂ ಮೋದಿ ಮತ್ತು ಅಮಿತ್ ಶಾ ರ ಪೋಟೋವಿದ್ದ ಫ್ಲೆಕ್ಸ್ ಹಾಕಿ ವಿಜಯೋತ್ಸವದ ಆಚರಿಸಿದ್ದರು. ಈ ಘಟನೆಯ ಸಂಬಂಧಿಸಿ ಈಗಾಗಲೇ ಪೊಲೀಸರು ಪ್ರಕರಣ ದಾಖಲಿಸಿ, ತನಿಖೆ ಮುಂದುವರಿಸಿದ್ದಾರೆ.