ದೇಶ ಈವರೆಗೆ ಕಾಣದ ಬಜೆಟ್ ಮಂಡಿಸುವೆ: ನಿರ್ಮಲಾ ಸೀತಾರಾಮನ್

0
645

ಸನ್ಮಾರ್ಗ ವಾರ್ತೆ

ಹೊಸದಿಲ್ಲಿ: ನೂರು ವರ್ಷದಲ್ಲಿ ದೇಶ ಇದುವರೆಗೆ ಕಾಣದ ಬಜೆಟನ್ನು 2021-22 ಆರ್ಥಿಕ ವರ್ಷದಲ್ಲಿ ಮಂಡಿಸಲಿದ್ದೇನೆ ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದರು.

ದೊಡ್ಡ ಮಹಾಮಾರಿಯ ನಂತರದ ಬಜೆಟ್ ಭಿನ್ನವಾಗಿರಲಿದೆ. ಸವಾಲುಗಳಿಂದ ಕೂಡಿದ ಪರಿಸ್ಥಿತಿಯಲ್ಲಿ ಬಜೆಟ್ ಮಂಡಿಸುವುದು. ಜನರು ಇದಕ್ಕೆ ಸಂಬಂಧಿಸಿದ ಸಲಹೆಗಳನ್ನು ನೀಡಬಹುದು ಎಂದು ನಿರ್ಮಲಾ ಸೀತಾರಾಮನ್ ಹೇಳಿದರು.

ಭಾರತದ ಜನಸಂಖ್ಯೆ ಪರಿಗಣಿಸಿದಾಗ ಉತ್ತಮ ಬೆಳವಣಿಗೆ ದೇಶದಲ್ಲಿ ಆಗಿದೆ. ಜಾಗತಿಕ ಬೆಳವಣಿಗೆಗೆ ಭಾರತ ದೊಡ್ಡ ಕೊಡುಗೆ ನೀಡಿದೆ ಎಂದು ನಿರ್ಮಲಾ ಸೀತಾರಾಮನ್ ತಿಳಿಸಿದ್ದಾರೆ.

ಮೂಲಭೂತ ಸೌಕರ್ಯದ ಅಭಿವೃದ್ಧಿಗಾಗಿ ಹೆಚ್ಚು ಹಣವನ್ನು ಮೀಸಲಿಡಲಾಗುವುದು. ಖಾಸಗಿ ಕ್ಷೇತ್ರದ ಸಹಕಾರದಿಂದ ಆಸ್ಪತ್ರೆಗಳ ಅಭಿವೃದ್ಧಿ ಮಾಡಲಾಗುವುದು ಎಂದು ನಿರ್ಮಲಾ ಸೀತಾರಾಮನ್ ಹೇಳಿದರು.

2021-22 ಆರ್ಥಿಕ ವರ್ಷದ ಬಜೆಟ್ ಫೆಬ್ರುವರಿ ಒಂದಕ್ಕೆ ಮಂಡಿಸುವುದಾಗಿ ಅವರು ಹೇಳಿದರು. ಕೊರೋನಾದಿಂದ ಸಮಸ್ಯೆ ಅನುಭವಿಸುತ್ತಿರುವ ಅರ್ಥ ವ್ಯವಸ್ಥೆಯಲ್ಲಿ ಬೆಳವಣೆಯಾಗಲು ಬಜೆಟ್‍ನಲ್ಲಿ ಮೊದಲಾದ್ಯತೆ ನೀಡಲಾಗುವುದು ಎಂದರು.