ಕೊರೋನ ಬಂದರೆ ಮಮತಾ ಬ್ಯಾನರ್ಜಿಯವರನ್ನು ಅಪ್ಪಿಕೊಳ್ಳುವೆ ಎಂದ ಬಿಜೆಪಿ ರಾಷ್ಟ್ರೀಯ ಕಾರ್ಯದರ್ಶಿಗೆ ಕೊರೋನ ದೃಢ

0
486

ಸನ್ಮಾರ್ಗ ವಾರ್ತೆ

ಹೊಸದಿಲ್ಲಿ,ಅ.2: ಕೊರೋನ ಬಂದರೆ ಮೊದಲು ಹೋಗಿ ಪಶ್ಚಿಮಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯವರನ್ನು ಅಪ್ಪಿಕೊಳ್ಳುವೆ ಎಂದು ಹೇಳಿದ ಬಿಜೆಪಿ ರಾಷ್ಟ್ರೀಯ ಕಾರ್ಯದರ್ಶಿ ಅನುಪಮ್ ಹಸ್ರಗೆ ಕೊರೋನ ದೃಢಪಟ್ಟಿದೆ. ರೋಗ ಪೀಡಿತರಾದ ಬಳಿಕ ಅನುಪಮ್ ಹಸ್ರರನ್ನು ಕೊಲ್ಕತಾದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಇವರೇ ಸಾಮಾಜಿಕ ಮಾಧ್ಯಮಗಳಲ್ಲಿ ತನಗೆ ಕರೋನ ಸೋಂಕು ತಗುಲಿರುವುದಾಗಿ ಅವರು ದೃಢಪಡಿಸಿದ್ದಾರೆ.

ಬಿಜೆಪಿ ರಾಷ್ಟ್ರೀಯ ಕಾರ್ಯದರ್ಶಿಯಾಗಿ ಅಧಿಕಾರವಹಿಸಿಕೊಂಡ ನಂತರ ಅನುಪನ್ ಹಸ್ರ 24 ಪರಗಣ ಜಿಲ್ಲೆಯಲ್ಲಿ ನಡೆದ ಪಕ್ಷದ ಸಭೆಯಲ್ಲಿ ಭಾಗವಹಿಸಿದ ಬಳಿಕ ಮಾಧ್ಯಮಗಳೊಂದಿಗೆ ಮಾತಾಡುತ್ತ ವಿವಾದ ಹೇಳಿಕೆ ನೀಡಿದ್ದರು. ಅನುಪಮ್ ಹಸ್ರರ ವಿರುದ್ಧ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ. ಮಹಿಳಾ ಮುಖ್ಯಮಂತ್ರಿಯನ್ನು ಅಪಮಾನಿಸುವ ಹೇಳಿಕೆ, ಅಂಟು ರೋಗ ಹರಡುವ ಯತ್ನವಿದು ಎಂದು ತೃಣಮುಲ ಕಾಂಗ್ರೆಸ್‍ ವಿಭಾಗವು ಸಿಲಿಗುರಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿತ್ತು.

ಮಾಸ್ಕ್ ಧರಿಸದೆ, ಸಾಮಾಜಿಕ ಅಂತರ ಪಾಲಿಸದೆ ಹಸ್ರ ಮತ್ತು ಬಿಜೆಪಿ ಕಾರ್ಯಕರ್ತರು ಸಭೆಯಲ್ಲಿ ಭಾಗವಹಿಸಿದ್ದರು. ಯಾಕೆ ಮಾಸ್ಕ್ ಧರಿಸಿಲ್ಲ ಎಂದು ಪ್ರಶ್ನಿಸಿದ ಪತ್ರಕರ್ತರಿಗೆ ಕೊರೋನಕ್ಕೀಂತ ದೊಡ್ಡ ಶತ್ರುವಿನೊಂದಿಗೆ ಹೋರಾಡುತ್ತಿದ್ದೇನೆ. ‘ಅದು ಮಮತಾ ಬ್ಯಾನರ್ಜಿ’ ಎಂಬುದಾಗಿ ಪ್ರತಿಕ್ರಿಯೆ ನೀಡಿದ್ದರು.