ವೈಯಕ್ತಿಕ ದಾಳಿಯಲ್ಲಿ ತಲ್ಲೀನರಾದ ಟ್ರಂಪ್-ಬೈಡನ್‌ರಿಗಿಂತ ಭಿನ್ನವಾದ ನ್ಯೂಝಿಲೆಂಡ್‌ನ ಜೆಸಿಂತಾ-ಜೂಡಿತ್‍ ಸಂವಾದ

0
469

ಸನ್ಮಾರ್ಗ ವಾರ್ತೆ

ಅಕ್ಲೆಂಡ್.ಅ.2: ನಿಂದಿಸಿ, ವೈಯಕ್ತಿಕ ದಾಳಿ ಮಾಡಿ ಅಮೆರಿಕದ ಅಧ್ಯಕ್ಷೀಯ ಚುನಾವಣೆಯ ಇತಿಹಾಸದಲ್ಲಿ ಅತ್ಯಂತ ಕೆಟ್ಟ ಟಿವಿ ಸಂವಾದದಲ್ಲಿ ತೊಡಗಿರುವ ಡೊನಾಲ್ಡ್ ಟ್ರಂಪ್ ಮತ್ತು ಜೊ ಬೈಡನ್‍ರಿಗೆ ಟಿವಿ ಚರ್ಚೆಯ ಅಪೂರ್ವ ಮಾದರಿಯೊಂದಿದೆ. ಅಕ್ಟೋಬರ್ 17ರಂದು ನಡೆಯುವ ನ್ಯೂಝಿಲೆಂಡ್ ಚುನಾವಣೆಯಲ್ಲಿ ಪ್ರಧಾನಿ ಜೆಸಿಂತಾ ಅರ್ಡನ್ ಮತ್ತು ಪ್ರತಿಸ್ಪರ್ಧಿ ಜೂಡಿತ್ ಕಾಲಿನ್ಸ್‍ರ ಟಿವಿ ಸಂವಾದ ಟ್ರಂಪ್-ಜೊ ಬೈಡನ್‍ರಿಗೆ ಮಾದರಿಯುತವಾಗಿದೆ.

ಪರಸ್ಪರ ನಕ್ಕು, ಅಭಿನಂದಿಸಿ, ಹಾಸ್ಯಮಾಡಿ ದೇಶ ಎದುರಿಸುತ್ತಿರುವ ವಿಷಯಗಳನ್ನು ಎತ್ತಿ ಹಿಡಿದು ಇಬ್ಬರು ಮಹಿಳೆಯರು ಟಿವಿ ಸಂವಾದದ ಮೂಲಕ ಚರ್ಚಿಸಿದರು.

ವೈಯಕ್ತಿಯ ದಾಳಿಯೊ, ಪ್ರತಿಸ್ಪರ್ಧಿ ಮಾತಾಡುವಾಗ ಅಡ್ಡಿಪಡಿಸುವುದನ್ನೋ ಇಬ್ಬರು ಮಾಡಲಿಲ್ಲ. ಹಾಗಿದ್ದರೂ ಮತದಾರರಲ್ಲಿ ಹೇಳಬೇಕಾಗಿದ್ದನ್ನು ಇಬ್ಬರೂ ಹೇಳಿದರು.

ಜೆಸಿಂತಾ, ಜೂಡಿತ್ ಕೊರೋನ ಲಾಕ್ ಡೌನ್ ಸಹಿತ ಅನೇಕ ವಿಷಯಗಳನ್ನು ಬಲವಾಗಿ ಚರ್ಚಿಸಿದರೆ. ಅದು ಗೌರವಯುವಾಗಿತ್ತು. ತಾನು ಹಿಂದೆ ಗಾಂಜಾ ಬಳಸುತ್ತಿದ್ದೆ ಎಂದು ಜೆಸಿಂತಾ ಒಪ್ಪಿದರು. ಲೇಬರ್ ಪಾರ್ಟಿ ನಾಯಕಿಯಾದವರ ಎರಡನೇ ಬಾರಿ ಆಯ್ಕೆಯನ್ನು ಬಯಸುತ್ತಿದ್ದಾರೆ. ಮಾಜಿ ಪೊಲೀಸ್ ಸಚಿವೆಯಾದ ಜೂಡಿತ್‍ರ ನೇತೃತ್ವದಲ್ಲಿ ನ್ಯಾಶನಲ್ ಪಾರ್ಟಿ ಅಧಿಕಾರ ಹಿಡಿಯುವ ಶ್ರಮ ನಡೆಸುತ್ತಿದೆ.