ಸನ್ಮಾರ್ಗ ವಾರ್ತೆ
ಹೊಸದಿಲ್ಲಿ: ಕೇರಳವು ಐಎಸ್ ಭಯೋತ್ಪಾದನಾ ಸಂಘಟನೆಗೆ ರಿಕ್ರ್ಯೂಟ್ ಕೇಂದ್ರವಾಗಿ ಬದಲಾಗಿದೆ ಎಂದು ಬಿಜೆಪಿಯ ಅಧ್ಯಕ್ಷ ಜೆಪಿ ನಡ್ಡಾ ಹೇಳಿಕೆ ನೀಡಿದ್ದಾರೆ. ಕೇರಳದಲ್ಲಿ ಭಯೋತ್ಪಾನದೆ ಮತ್ತು ಚಿನ್ನ ಕಳ್ಳ ಸಾಗಾಟ ನಡೆಯುತ್ತಿದೆ. ಮುಖ್ಯಮಂತ್ರಿಯ ಮೇಲೆಯೇ ಇಂಥ ಆರೋಪ ಆರೋಪ ಕೇಳಿ ಬಂತು ಎಂದು ಅವರು ಹೇಳಿದರು.
ಅವರು ಕಲ್ಲಿಕೋಟೆಯಲ್ಲಿ ಕಟ್ಟಲಾಗಿದ್ದ ಬಿಜೆಪಿ ಜಿಲ್ಲಾ ಕಚೇರಿಯನ್ನು ಉದ್ಘಾಟಿಸಿ ವೀಡಿಯೊದಲ್ಲಿ ಭಾಷಣ ಮಾಡುತ್ತಿದ್ದರು. ಕೊರೋನ ಪ್ರತಿರೋಧ ಕ್ರಮಗಳಲ್ಲಿ ಕೂಡ ಕೇರಳ ಭಾಗವಹಿಸಿಲ್ಲ. ಕೇಂದ್ರ ಆರೋಗ್ಯ ಸಚಿವರು ಕೇರಳಕ್ಕೆ ವಿಶೇಷ ಪ್ಯಾಕೇಜ್ ನೀಡಿದ್ದಾರೆ ಎಂದು ನಡ್ಡ ಹೇಳಿದ್ದು , ಎನ್ಐಎ ಐಎಸ್ ಆರೋಪದಲ್ಲಿ ಇಬ್ಬರನ್ನು ವಶಕ್ಕೆ ಪಡೆದುಕೊಂಡ ಬೆನ್ನಿಗೆ ಕೇರಳದ ಕುರಿತು ಕೇರಳದಲ್ಲೇ ಕುಳಿತು ಹೀಗೆ ಹೇಳಿದ್ದಾರೆ.
ಶಿಫಾ ಹಾರಿಸ್, ಮಿಸ್ಹಾ ಸಿದ್ದೀಕ್ ಎಂಬಿಬ್ಬರನ್ನು ನಿನ್ನೆ ದಿಲ್ಲಿಯಿಂದ ಬಂದ ಎನ್ಐಎ ಬಂಧಿಸಿ ಕರೆದುಕೊಂಡು ಹೋಗಿದೆ. ಇಬ್ಬರು ಯುವತಿಯರು ಕ್ರೋನಿಕಲ್ ಫೌಂಡೇಶನ್ ಎಂಬ ಗ್ರೂಪ್ ಮಾಡಿ ಸಾಮಾಜಿಕ ಮಾಧ್ಯಮಗಳಲ್ಲಿ ಐಎಸ್ ಆಶಯದ ಪರವಾಗಿ ಪ್ರಚಾರ ನಡೆಸುತ್ತಿದ್ದರು ಎಂದು ಎನ್ಐಎ ಹೇಳಿದೆ.












