ಹೆಚ್.ಐ. ಎಫ್. ನೂತನ ಅಧ್ಯಕ್ಷರಾಗಿ ನಾಝಿಮ್ ಎ.ಕೆ. ಆಯ್ಕೆ

0
687

ಸನ್ಮಾರ್ಗ ವಾರ್ತೆ

ಮಂಗಳೂರು: ಮಂಗಳೂರಿನ ಸಾಮಾಜಿಕ ಸೇವಾ ಸಂಸ್ಥೆಯಾದ ಹೈಲ್ಯಾಂಡ್ ಇಸ್ಲಾಮಿಕ್ ಫೋರಮ್(HIF) ನೂತನ ಅಧ್ಯಕ್ಷರಾಗಿ ನಾಝಿಮ್ ಎ.ಕೆ. ಆಯ್ಕೆಯಾಗಿದ್ದಾರೆ.

ಸಂಸ್ಥೆಯ ಆಡಿಟೋರಿಯಂನಲ್ಲಿ ನಡೆದ ಮಹಾಸಭೆಯಲ್ಲಿ ನೂತನ ಹೆಚ್.ಐ.ಎಫ್. ನ ನೂತನ ಅಧ್ಯಕ್ಷರಾಗಿ ನಾಜಿಮ್ AK ರವರನ್ನು ಚುನಾವಣೆ ಮೂಲಕ ಆಯ್ಕೆ ಮಾಡಲಾಗಿದೆ. ಮುಂದಿನ ಮೂರು ವರ್ಷಗಳ ಕಾಲ ಅಧ್ಯಕ್ಷ ಸ್ಥಾನವನ್ನು ವಹಿಸಲಿರುವರು.

ಮುಹಮ್ಮದ್ ಮುಸ್ಲಿಂ ಕೊಪ್ಪರವರು ಚುನಾವಣಾಧಿಕಾರಿಯಾಗಿ ಭಾಗವಹಿಸಿದ್ದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ನಿಕಟಪೂರ್ವ ಅಧ್ಯಕ್ಷ ಸಾಜಿದ್ ಎ.ಕೆ. ವಹಿಸಿದ್ದರು. ಅಶ್ರಫ್ ರವರು ನಿರೂಪಿಸಿ, ವಂದಿಸಿದರು.