ಸನ್ಮಾರ್ಗ ವಾರ್ತೆ
ಹೊಸದಿಲ್ಲಿ: ಕೊರೋನ ಪ್ರಕರಣದಲ್ಲಿ ದೇಶದಲ್ಲಿ ಹೆಚ್ಚಳ ಕಂಡು ಬಂದಿರುವ ಪರಿಸ್ಥಿತಿಯಲ್ಲಿ ವಿದೇಶಗಳಿಗೆ ಕೊರೋನ ಪ್ರತಿರೋಧ ವ್ಯಾಕ್ಸಿನ್ ಕಳುಹಿಸುವುದನ್ನು ಭಾರತ ತಾತ್ಕಾಲಿಕವಾಗಿ ನಿಲ್ಲಿಸಿದೆ ಎಂದು ವರದಿಯಾಗಿದೆ. ಆರೋಗ್ಯ ಸಚಿವಾಲಯದ ಸೂಚನೆ ಪ್ರಯುಕ್ತ ಈ ಕ್ರಮ ಕೈಗೊಳ್ಳಲಾಯಿತು ಎಂದು ದಿ ಗಾರ್ಡಿಯನ್ ವರದಿ ಮಾಡಿದೆ.
ಸೆರಂ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾಕ್ಕೆ ಈ ಕುರಿತು ನಿರ್ದೇಶ ನೀಡಲಾಗಿದೆ. ಸೆರಂ ಇನ್ಸ್ಟಿಟ್ಯೂಟ್ನ ಆಸ್ಟ್ರೊಸೆನಕ ದೇಶದಿಂದ ಹೆಚ್ಚು ರಫ್ತಾಗುತ್ತಿತ್ತು. ಭಾರತದಿಂದ ಈ ವ್ಯಾಕ್ಸಿನ್ ಐವತ್ತಕ್ಕೂ ಹೆಚ್ಚು ದೇಶಗಳಿಗೆ ಕೊಡುತ್ತಿತ್ತು.
ಫೆಬ್ರುವರಿಯಲ್ಲಿ ಒಂದು ಲಕ್ಷಕ್ಕೂ ಹೆಚ್ಚು ದೇಶದಲ್ಲಿ ಕೊರೋನ ಪೀಡಿತರಾಗಿ ಚಿಕಿತ್ಸೆಯಲ್ಲಿದ್ದರು. ಆದರೆ ಐದು ವಾರಗಳಲ್ಲಿ ಮೂರುಪಟ್ಟು ಚಿಕಿತ್ಸೆ ಪಡೆಯುವವರ ಸಂಖ್ಯೆಯಲ್ಲಿ ಹೆಚ್ಚಳವಾಗಿದೆ. ಹೊಸ ಪ್ರಭೇದದ ವೈರಸ್ ಹದಿನೆಂಟು ರಾಜ್ಯಗಳಲ್ಲಿ ಕಂಡು ಬಂದಿದೆ.












