ದಿಲ್ಲಿಯಲ್ಲಿ ಬಿಜೆಪಿ ಕಾರ್ಯಕರ್ತನ ಗುಂಡಿಕ್ಕಿ ಹತ್ಯೆ

0
338

ಸನ್ಮಾರ್ಗ ವಾರ್ತೆ

ಹೊಸದಿಲ್ಲಿ: ಪೂರ್ವ ದಿಲ್ಲಿಯ ಗಾಝಿಪುರದಲ್ಲಿ ಬಿಜೆಪಿ ಕಾರ್ಯಕರ್ತನನ್ನು ಗುಂಡು ಹಾರಿಸಿ ಹತ್ಯೆಗೈಯ್ಯಲಾಗಿದ್ದು, ಬುಧವಾರ ರಾತ್ರೆ 8:15ಕ್ಕೆ ಬಿಜೆಪಿ ಮಯೂರ್ ವಿಹಾರ್ ಜಿಲ್ಲಾ ಕಾರ್ಯದರ್ಶಿ ಜಿತು ಚೌಧರಿಯ ಹತ್ಯೆ ನಡೆದಿದೆ. ಕೇಸು ದಾಖಲಿಸಿಕೊಂಡಿದ್ದು ತನಿಖೆ ನಡೆಸುತ್ತಿದ್ದಾರೆ ಎಂದು ಪೂರ್ವ ಉಪ ಪೊಲೀಸ್ ಆಯುಕ್ತ ಪ್ರಿಯಾಂಕ ಕಶ್ಯಪ್ ತಿಳಿಸಿದರು.

ಪೊಲೀಸ್ ಅಧಿಕಾರಿಗಳು ಘಟನೆಯ ಸ್ಥಳದಿಂದ ಗುಂಡುಗಳನ್ನು ಮತ್ತು ಇತರ ಸಾಕ್ಷ್ಯಗಳನ್ನು ವಶಪಡಿಸಿಕೊಂಡಿದ್ದಾರೆ. ಸಿಸಿಟಿವಿ ದೃಶ್ಯಗಳನ್ನು ಪರಿಶೀಲಿಸಲಾಗುತ್ತಿದ್ದು, ಪ್ರತ್ಯಕ್ಷದರ್ಶಿಗಳಿಂದ ಹೇಳಿಕೆ ಪಡೆದುಕೊಳ್ಳಲಾಗುತ್ತಿದೆ. ಈ ಹಿಂದೆ ಪೂರ್ವ ದಿಲ್ಲಿಯ ಜಹಾಂಗೀರ ಪುರದಲ್ಲಿ ಹನುಮಾನ್ ಪುರದಲ್ಲಿ ಹನುಮಾನ್ ಜಯಂತಿ ಸಂದರ್ಭದಲ್ಲಿ ಕೋಮು ಸಂಘರ್ಷ ನಡೆದಿತ್ತು ಎಂಬುದಾಗಿ ವರದಿಯಾಗಿದೆ.