ಸನ್ಮಾರ್ಗ ವಾರ್ತೆ
ಅಹ್ಮದಾಬಾದ್: ಗುಜರಾತಿನ ಕಾಂಗ್ರೆಸ್ ನಾಯಕ ಶಾಸಕ ಜಿಗ್ನೇಶ್ ಮೇವಾನಿ ಅವರನ್ನು ಅವರ ಪಾಲನ್ ಪುರ ನಿವಾಸದಿಂದ ಅಸ್ಸಾಂ ಪೊಲೀಸರು ಬಂಧಿಸಿದ್ದಾರೆ. ಬುಧವಾರ ರಾತ್ರೆ 11:30ಕ್ಕೆ ಬಂಧಿಸಲಾಗಿದೆ.
ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಟ್ವೀಟ್ನಲ್ಲಿ ಕ್ರಮ ಜರಗಿಸಲಾಗಿದೆ. ಗೋಡ್ಸೆಯನ್ನು ದೇವರನ್ನಾಗಿ ಕಾಣುವ ಪ್ರಧಾನಿ ಗುಜರಾತಿನ ಕೋಮು ಗಲಭೆಗಳನ್ನು ಇಲ್ಲದಾಗಿಸಿ ಶಾಂತಿ ಮತ್ತು ಸೌಹಾರ್ದಕ್ಕೆ ಮನವಿ ಮಾಡಬೇಕೆಂದು ಮೇವಾನಿ ಟ್ವೀಟ್ ಮಾಡಿದ್ದರು. ಅಸ್ಸಾಂನ ಅನೂಪ್ ಕುಮಾರ್ ಡೇ ದೂರು ನೀಡಿದ್ದು, ಇದುವರೆಗೆ ಎಫ್ಐಆರ್ನ ಪ್ರತಿಯನ್ನು ನೀಡಿಲ್ಲ ಎಂದು ಮೇವಾನಿಯವರ ಅನುಯಾಯಿಗಳು ಹೇಳುತ್ತಿದ್ದಾರೆ.
ಮೇವಾನಿಯವರು ಗುಜರಾತಿನ ವದ್ಗಾಂ ವಿಧಾನಸಭಾ ಕ್ಷೇತ್ರದ ಶಾಸಕರಾಗಿದ್ದಾರೆ. ಕಾಂಗ್ರೆಸ್ ಇಂದು ಬಂಧನವನ್ನು ವಿರೋಧಿಸಿ ದಿಲ್ಲಿಯಲ್ಲಿ ಪ್ರತಿಭಟನಾ ಸಂಗಮ ನಡೆಸಲಿದೆ.












