ಬಿಜೆಪಿಯ 400 ಸೀಟು ಕನಸು, ಮೊದಲ ಹಂತದ ಚುನಾವಣೆಯಲ್ಲಿಯೇ ಟುಸ್ಸ್: ತೇಜಸ್ವಿ ಯಾದವ್

0
264

ಸನ್ಮಾರ್ಗ ವಾರ್ತೆ

ಪಾಟ್ನಾ: ಲೋಕಸಭೆ ಚುನಾವಣೆಯಲ್ಲಿ 400 ಸ್ಥಾನಗಳನ್ನು ಗೆಲ್ಲುವ ಬಿಜೆಪಿಯ ಕನಸು ಮೊದಲ ಹಂತದ ಚುನಾವಣೆಯಲ್ಲೇ ವಿಫಲವಾಗಿದೆ ಎಂದು ಆರ್‌ಜೆಡಿ ನಾಯಕ ತೇಜಸ್ವಿ ಯಾದವ್ ಹೇಳಿದ್ದಾರೆ.

ಮಹಾಘಡಬಂಧನ್ ಮೊದಲ ಹಂತದ ಮತದಾನದಲ್ಲಿ ನಾಲ್ಕು ಸ್ಥಾನ ಗೆಲ್ಲುವುದು ಖಚಿತ. ಬಿಜೆಪಿಯ 400 ಸ್ಥಾನಗಳ ಹಕ್ಕು ಮತದಾನದ ಮೊದಲ ದಿನವೇ ಛಿದ್ರವಾಗಿದೆ. ಬಿಹಾರದ ಜನರಿಗೆ ಎಲ್ಲವೂ ತಿಳಿದಿದೆ. ಬಿಹಾರ ಜನತೆ ಈ ಬಾರಿ ಬಿಜೆಪಿಗೆ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಆರ್‌ಜೆಡಿ ನಾಯಕ ಹೇಳಿದ್ದಾರೆ.

ಮೊದಲ ಹಂತದಲ್ಲಿ ಸ್ಪರ್ಧೆ ಇಲ್ಲ. ಈ ಬಾರಿ ಬಿಹಾರ ಬಿಜೆಪಿಗೆ ಆಘಾತಕಾರಿ ಹೊಡೆತ ನೀಡಲಿದೆ ಎಂದು ಮೊದಲೇ ಹೇಳಿದ್ದೆವು. ಅವರು ಬಿಹಾರದ ಜನತೆಗೆ ಏನೂ ಮಾಡಿಲ್ಲ. 2014 ಮತ್ತು 2019ರಲ್ಲಿ ಪ್ರಧಾನಿ ನೀಡಿದ ಭರವಸೆಗಳನ್ನು ಈಡೇರಿಸಿಲ್ಲ. ಅವರ ಹೇಳಿಕೆಗಳು ಮತ್ತು ಪೊಳ್ಳು ಭರವಸೆಗಳಿಂದ ಜನರು ಬೇಸತ್ತಿದ್ದಾರೆ. ಬಿಹಾರಕ್ಕೆ ವಿಶೇಷ ಸ್ಥಾನಮಾನದೊಂದಿಗೆ ವಿಶೇಷ ಪ್ಯಾಕೇಜ್ ಘೋಷಿಸಿದ್ದೇವೆ ಎಂದು ತೇಜಸ್ವಿ ಯಾದವ್ ಹೇಳಿದರು.

ಈ ಬಾರಿಯ ಚುನಾವಣೆಯಲ್ಲಿ ಪ್ರಾದೇಶಿಕ ಸಮಸ್ಯೆಗಳು ಪ್ರತಿಬಿಂಬಿಸಲಿವೆ.

ಮಹಾಘಡಬಂದನ್ ಮತ್ತು ಇಂಡಿಯಾ ಅಲೈಯನ್ಸ್ ಒಟ್ಟಾಗಿ ಕೆಲಸ ಮಾಡುತ್ತಿವೆ. ಬಿಹಾರದಲ್ಲಿ ನಿರುದ್ಯೋಗ ದೊಡ್ಡ ಸಮಸ್ಯೆಯಾಗಿದೆ. ಅದರೊಂದಿಗೆ ಹಣದುಬ್ಬರ, ಬಡತನ, ಬಂಡವಾಳ ಹೂಡಿಕೆ, ವಲಸೆ ಮತ್ತು ಪ್ರವಾಹಗಳೂ ಜನರನ್ನು ಭಾದಿಸಿರುವ ಸಮಸ್ಯೆಗಳಾಗಿವೆ. ಈ ಬಾರಿ ಬಿಜೆಪಿ ಆತಂಕಕ್ಕೆ ಒಳಗಾಗಿದೆ.

ಸಂವಿಧಾನ ರದ್ದಾಗುತ್ತದೆ ಎನ್ನುತ್ತಾರೆ. ಸಂವಿಧಾನವನ್ನು ನಾಶಪಡಿಸಲು ಪ್ರಯತ್ನಿಸುವವರು ತಮ್ಮನ್ನು ತಾವೇ ನಾಶಪಡಿಸಿಕೊಳ್ಳುತ್ತಾರೆ ತೇಜಸ್ವಿ ಯಾದವ್ ಪ್ರತಿಪಾದಿಸಿದರು. ಬಿಹಾರದಲ್ಲಿ ಮೊದಲ ಹಂತದ ಮತದಾನದಲ್ಲಿ ಶೇ.48.88ರಷ್ಟು ಮತದಾನವಾಗಿದೆ.

LEAVE A REPLY

Please enter your comment!
Please enter your name here