ಸನ್ಮಾರ್ಗ ವಾರ್ತೆ
ನೈಜೀರಿಯ: ನೈಜೀರಿಯದ ಭಯೋತ್ಪಾದಕ ಸಂಘಟನೆ ಬೊಕೊ ಹರಾಂನ ಮುಖ್ಯಸ್ಥ ಅಬೂಬಕರ ಶೆಖಾವೊ ಕೊಲೆಯಾಗಿದ್ದಾನೆ ಎಂದು ಇಸ್ಲಾಮಿಕ್ ಸ್ಟೇಟ್ ವೆಸ್ಟ್ ಆಫ್ರಿಕ ಪ್ರಾವಿನ್ಸ್(ಐಎಸ್ಡಬ್ಲಯೂಎಪಿ) ಆಡಿಯೊ ಸಂದೇಶದಲ್ಲಿ ತಿಳಿಸಿದೆ. ಬೊಕೊ ಹರಾಂ ಮತ್ತು ಐಎಸ್ ಡಬ್ಲ್ಯೂಎಪಿ ಪರಸ್ಪರ ಘರ್ಷಣೆ ನಡೆಸುವ ತೀವ್ರವಾದಿ ಗುಂಪುಗಳಾಗಿವೆ. ಮೇ 18ಕ್ಕೆ ನಡೆದ ಘರ್ಷಣೆಯಲ್ಲಿ ಅಬೂಬಕರ್ ಹತ್ಯೆಯಾಗಿದ್ದು ಬಾಂಬ್ ಸ್ಫೋಟದಿಂದ ಆತ ಮೃತಪಟ್ಟಿದ್ದಾನೆ ಎಂದು ಸಂದೇಶದಲ್ಲಿ ಹೇಳಲಾಗಿದೆ.
ಇದೇವೇಳೆ ಸ್ಫೋಟಕ ವಸ್ತು ಸ್ಫೋಟಿಸಿಕೊಂಡು ಅಬೂಬಕರ್ ಸ್ವಯಂ ಆತ್ಮಹತ್ಯೆ ಮಾಡಿಕೊಂಡಿರುವನೆಂದು ವರದಿಯಾಗಿದೆ. ನೈಜೀರಿಯದ ಬೊಕೊ ಹರಾಂ ಕುರಿತು ಅಧ್ಯಯನ ನಡೆಸುವ ಗುಪ್ತಚಾರ ವಿಭಾಗವು ಅಬೂಬಕರ್ ಸಾವನ್ನು ದೃಢಪಡಿಸಿದ್ದಾರೆ.
ನೈಜೀರಿಯದಲ್ಲಿ 2014ರಲ್ಲಿ 270ಕ್ಕೂ ಹೆಚ್ಚು ಶಾಲಾ ಮಕ್ಕಳ ಅಪಹರಣವನ್ನು ಬೊಕೊ ಹರಾಂ ಮಾಡಿತ್ತು. ಇದರ ವಿರುದ್ಧ ‘ನಮ್ಮ ಮಕ್ಕಳನ್ನು ನಮಗೆ ಕೊಡಿ’ ಎಂಬ ಅಭಿಯಾನ ನಡೆದಿತ್ತು. ಇದನ್ನು ಮಿಶೆಲ್ ಒಬಾಮ ಕೂಡ ಬೆಂಬಲಿಸಿದ್ದರು.












