ಮಾಡರ್ನಾ ಕೊರೋನ ವ್ಯಾಕ್ಸಿನ್ ಸ್ವೀಕರಿಸಿದ ವೈದ್ಯರಿಗೆ ಗಂಭೀರ ಅಲರ್ಜಿ

0
465

ಸನ್ಮಾರ್ಗ ವಾರ್ತೆ

ನ್ಯೂಯಾರ್ಕ್,ಡಿ.26: ಅಮೆರಿಕದಲ್ಲಿ ಮಾಡರ್ನಾ ವ್ಯಾಕ್ಸಿನ್ ಸ್ವೀಕರಿಸಿದ ವೈದ್ಯರಿಗೆ ಅಲರ್ಜಿಯಾಗಿದ್ದು ಬೋಸ್ಟನ್‍ನ ವೈದ್ಯರು ಗಂಭೀರ ಅಲರ್ಜಿ ಅನುಭವಿಸುತ್ತಿದ್ದಾರೆ ಎಂದು ದೂರಲಾಗಿದೆ. ಸಮುದ್ರ ಮೀನು ತಿಂದರೆ ಕೆಲವರಿಗೆ ಅಲರ್ಜಿ ಆಗುತ್ತದೆ. ಇದೇ ರೋಗದ ಅವಸ್ಥೆ ವೈದ್ಯರಲ್ಲಿ ಕಾಣಿಸಿಕೊಂಡಿದೆ. ಬೊಸ್ಟನ್ ಮೆಡಿಕಲ್ ಸೆಂಟರ್‌ನ ಆಂಕೊಲಜಿಸ್ಟ್ ಡಾ. ಹುಸೈನ್ ಸದ್ರಾಸದೆ ವ್ಯಾಕ್ಸಿನ್ ಚುಚ್ಚುಮದ್ದು ಹಾಕಿಸಿದ್ದರು. ಒಂದು ಗಂಟೆಯಲ್ಲಿ ವೈದ್ಯರಿಗೆ ತಲೆಸುತ್ತು ಬಂತು. ಎದೆಬಡಿತ ಹೆಚ್ಚಿತು. ನಂತರ ಅವರನ್ನು ಆಸ್ಪತ್ರೆಗೆ ದಾಖಲಿಸಿದ್ದು ಈಗ ಡಿಸ್ಚಾರ್ಜ್ ಆಗಿದ್ದಾರೆ ಎಂದು ವರದಿ ತಿಳಿಸಿದೆ.

ಇದೇ ವೇಳೆ ಇದಕ್ಕೆ ಸಂಬಂಧಿಸಿ ಮಾಡರ್ನಾ ವ್ಯಾಕ್ಸಿನ್ ವಕ್ತಾ ರೇ ಜೊರ್ಡಾನ್ ಬಹಿರಂಗ ಹೇಳಿಕೆ ನೀಡಲು ನಿರಾಕರಿಸಿದ್ದಾರೆ. ಇಂತಹ ಅಪರೂಪದ ಘಟನೆಗಳಿಗೆ ಪ್ರತಿಕ್ರಿಯೆ ನೀಡಬೇಕಿಲ್ಲ ಎಂದು ಕಂಪೆನಿ ಅಂದುಕೊಂಡಿದೆ. ಮೆಡಿಕಲ್ ಸುರಕ್ಷಾ ತಂಡ ಈ ವಿಷಯವನ್ನು ಪರಿಶೀಲಿಸಿ ನೋಡುತ್ತಿದೆ ಎಂದು ಕಂಪೆನಿ ತಿಳಿಸಿದೆ.