ಸನ್ಮಾರ್ಗ ವಾರ್ತೆ
ಹೊಸದಿಲ್ಲಿ,ಡಿ.26: ಪ್ರಧಾನಿಯ ಶುಕ್ರವಾರದ ಭಾಷಣದಿಂದ ಹೊಸ ಕೃಷಿ ಕಾನೂನು ವಾಪಸು ಪಡೆಯುವುದಿಲ್ಲ ಎಂದು ಸ್ಪಷ್ಟವಾಗಿದೆ ಆದ್ದರಿಂದ ಪ್ರತಿಭಟನೆ ತೀವ್ರಗೊಳಿಸಲು ರೈತ ಸಂಘಟನೆಗಳು ಸಿದ್ಧವಾಗಿವೆ. ಕೃಷಿ ಕಾನೂನು ಹಿಂಪಡೆಯುವುದಿಲ್ಲ ಎಂಬ ನಿಲುವು ಮೋದಿಯ ಭಾಷಣದಿಂದ ವ್ಯಕ್ತವಾಗಿದೆ ಎಂದು ಬಿಕೆಯು ಪ್ರಧಾನ ಕಾರ್ಯದರ್ಶಿ ಆಲ್ ಇಂಡಿಯಾ ಸಂಘರ್ಷ ಸಮಿತಿಯ ಕಾರ್ಯಕಾರಿ ಸದಸ್ಯ ಜಗ್ಮೋಹನ್ ಸಿಂಗ್ ಹೇಳಿದರು.
ಕಾನೂನು ಹಿಂಪಡೆಯದೆ ದಿಲ್ಲಿ ಗಡಿಯ ಪ್ರತಿಭಟನೆ ಹಿಂಪಡೆಯುವುದಿಲ್ಲ. ಪ್ರಜಾಪ್ರಭುತ್ವ ವಿರೋಧಿ ದಾರಿಗಳನ್ನು ಸ್ವೀಕರಿಸುವುದಕ್ಕೆ ವಿರುದ್ಧ ನಮ್ಮ ಪ್ರತಿಭಟನೆಯಿದೆ. ಮೊದಲು, ರೈತರ ಅಭಿಪ್ರಾಯ ಕೇಳದೆ ಅವರು ಕಾನೂನು ಮಾಡಿದ್ದಾರೆ. ನಂತರ ಅವರು ಆ ಕಾನೂನು ರೈತರಿಗಾಗಿದೆ. ತಿದ್ದುಪಡಿಗೊ ಕಾನೂನಿಂದ ಹಿಂದೆ ಸರಿಯಲು ಸಿದ್ಧರಲ್ಲ ಎಂದು ತಿಳಿಸಿದ್ದಾರೆ. ಆದ್ದರಿಂದ ಯಾಕೆ ಆರಂಭದಿಂದಲೇ ಇಂತಹ ಕಾನೂನು ನಿರ್ಮಿಸುತ್ತಿದ್ದಾರೆ ಎಂದು ಜಗ್ಮೋಹನ್ ಸಿಂಗ್ ಕೇಳಿದರು
ರೈತರ ಕಾನೂನುಗಳನ್ನು ಹಿಂಪಡೆಯುವವರೆಗೆ ಪ್ರತಿಭಟನೆ ಮುಂದುವರಿಯಲಿದೆ. ರೈತರ ಸಂಘಟನೆಗಳ ನಿಲುವು ದೃಢವಾಗಿದೆ. ತಿಂಗಳುಗಟ್ಟಲೆ ಪ್ರತಿಭಟನೆ ಮುಂದುವರಿಸಲು ಸಿದ್ಧರಾಗಿದ್ದಾರೆ.
ಆದರೆ ರೈತ ಸಂಘಟನೆಗಳನ್ನು ಒಡೆದು ಪ್ರತಿಭಟನೆ ಇಲ್ಲದಂತೆ ಮಾಡಲು ಕೇಂದ್ರ ಸರಕಾರ ಸಜ್ಜಾಗಿದೆ. ಯಾವುದೇ ಕಾರಣಕ್ಕೂ ಪ್ರತಿಭಟನೆಯಿಂದ ಹಿಂದೆ ಸರಿಯುವುದಿಲ್ಲ ಎಂದು ರೈತರು ನಿಲುವು ಸ್ವೀಕರಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ರೈತರನ್ನು ಉದ್ದೇಶಿಸಿ ಶುಕ್ರವಾರ ಮಾತಾಡಿದ್ದು ರೈತರನ್ನು ಪ್ರತಿಪಕ್ಷಗಳು ತಪ್ಪು ಕಲ್ಪನೆಗೀಡು ಮಾಡಿವೆ ಎಂದಿದ್ದಾರೆ. ಆರು ರಾಜ್ಯಗಳ ಚುನಾವಣೆ ಮತ್ತು ರೈತರ ವಿಷಯವನ್ನು ಪ್ರಧಾನಿ ಮಾತಾಡಿದ್ದರು. ಭಾಷಣದಲ್ಲಿ ರೈತ ಹೋರಾಟದ ಬಗ್ಗೆ ಮೌನವಹಿಸಿದ್ದರು.












