ಇನ್ನು ಮಾಸ್ಕ್ ಕಡ್ಡಾಯವಲ್ಲ, ವ್ಯಾಕ್ಸಿನ್ ಸರ್ಟಿಫಿಕೆಟ್ ಅಗತ್ಯವಿಲ್ಲ: ಕೊರೋನ ನಿಯಂತ್ರಣ ತೆಗೆದು ಹಾಕಲು ಮುಂದಾದ ಬ್ರಿಟನ್

0
294

ಸನ್ಮಾರ್ಗ ವಾರ್ತೆ

ಲಂಡನ್: ಸಾರ್ವಜನಿಕ ಸ್ಥಳಗಳಲ್ಲಿ ಮಾಸ್ಕ್ ಧರಿಸುವುದು ಸಹಿತ ಕೊರೋನ ನಿಯಂತ್ರಣ ತೆಗೆದು ಹಾಕಲು ಬ್ರಿಟಿಷ್ ಪ್ರಧಾನಿ ಬೋರಿಸ್ ಜಾನ್ಸನ್ ಮುಂದಾಗಿದ್ದಾರೆರೆ. ವರ್ಕ್ ಫ್ರಂ ಹೋಮ್ ಕೂಡ ತೆರವಾಗಲಿದ್ದು, ಮುಂದಿನ ಗುರುವಾರದಿಂದ ಹೊಸ ನಿರ್ದೇಶನಗಳು ಇಂಗ್ಲೆಂಡ್ ನಲ್ಲಿ ಜಾರಿಗೊಳ್ಳಲಿದೆ. ವೈರಸ್ ವ್ಯಾಪನವು ಅದರ ಗರಿಷ್ಠ ಸ್ಥಿತಿಗೆ ತಲುಪಿದೆ ಎಂಬ ವರದಿಯ ಬಳಿಕ ನಿಯಂತ್ರಣಗಳ ತೆರವಿಗೆ ಪ್ರಧಾನಿ ಬೋರಿಸ್ ಜಾನ್ಸನ್ ಅವರು ಮುಂದಾಗಿದ್ದಾರೆ.

ಕಾರ್ಯಕ್ರಮಕ್ಕೆ ಹೋಗಲು ವ್ಯಾಕ್ಸಿನೇಶನ್ ಸರ್ಟಿಫಿಕೆಟ್ ಬೇಡ. ಹೌಸ್ ಆಫ್ ಕಾಮನ್ಸ್ ನಲ್ಲಿ ಪ್ರಧಾನಿ ಈ ಹೇಳಿಕೆ ನೀಡಿದ್ದಾರೆ. ಇಂಗ್ಲೆಂಡಿನಲ್ಲಿ ಕೊರೊನ ಅದರ ಗರಿಷ್ಠ ಸ್ಥಿತಿಯನ್ನು ತಲುಪಿದ್ದು, ಒಮಿಕ್ರಾನ್ ಹರಡುವ ಹಂತ ಹಿಂದೆ ಸರಿಯಿತು ಎಂದು ತಜ್ಞರು ಹೇಳುತ್ತಿದ್ದಾರೆ ಎಂದು ಬೊರಿಸ್ ಜಾನ್ಸನ್ ತಿಳಿಸಿದರು.

ಈ ಹಿಂದೆ ಒಮಿಕ್ರಾನ್ ಹರಡುವುದು ತೀವ್ರಗೊಂಡಿದ್ದರಿಂದ ಡಿಸೆಂಬರ್ ಎಂಟರವರೆಗೆ ಕಠಿಣ ನಿಯಂತ್ರಣ ಹೇರಲಾಗಿತ್ತು. ಇಂಗ್ಲೆಂಡ್ ನಲ್ಲಿ ಕಳೆದ 24 ಗಂಟೆಗಳಲ್ಲಿ 1,08,069 ಮಂದಿಗೆ ಕೊರೋನ ಹರಡಿತ್ತು.