ಸನ್ಮಾರ್ಗ ವಾರ್ತೆ-
ಹೊಸದಿಲ್ಲಿ, ಜ. 6: ರಾಷ್ಟ್ರೀಯ ಪೌರತ್ವ ಪಟ್ಟಿಯಲ್ಲಿಲ್ಲದ ಮಕ್ಕಳನ್ನು ಹೆತ್ತವರಿಂದ ಬೇರ್ಪಡಿಸಿ ಡಿಟೆನ್ಶನ್ ಸೆಂಟರ್ ನಲ್ಲಿರಿಸುವುದಿಲ್ಲ ಎಂದು ಕೇಂದ್ರ ಸರಕಾರ ಸುಪ್ರೀಂ ಕೋರ್ಟಿಗೆ ತಿಳಿಸಿದೆ. ಪೌರತ್ವ ಪಟ್ಟಿಯಲ್ಲಿ ಹೆತ್ತವರಿದ್ದೂ ಮಕ್ಕಳ ಸೇರದ ಸ್ಥಿತಿಯಲ್ಲಿ ಅವರನ್ನು ತಂದೆತಾಯಿಯ ಜೊತೆ ಇರಲು ಬಿಡಲಾಗುವುದು ಎಂದು ಕೇಂದ್ರ ಸರಕಾರಕ್ಕಾಗಿ ಹಾಜರಾದ ಅಟಾರ್ನಿ ಜನರಲ್ ಕೆ ಕೆ ವೇಣುಗೋಪಾಲ್ ಸುಪ್ರೀಂಕೋರ್ಟಿಗೆ ತಿಳಿಸಿದರು.
ಪೌರತ್ವ ಪಟ್ಟಿಯಲ್ಲಿ ಸೇರಿಲ್ಲ ಎಂದು ಅರುವತ್ತು ಮಕ್ಕಳನ್ನು ಡಿಟೆನ್ಶನ್ ಸೆಂಟರ್ ನಲ್ಲಿರಿಸಲಾಗಿದೆ ಎಂದು ಸಲ್ಲಿಸಲಾದ ಅರ್ಜಿಯಲ್ಲಿ ಕೇಂದ್ರ ತನ್ನ ನಿಲುವನ್ನು ತಿಳಿಸಿದೆ. ಹೆತ್ತವರಲ್ಲಿ ಒಬ್ಬರೋ ಇಬ್ಬರೋ ಪಟ್ಟಿಯಲ್ಲಿ ಇದ್ದರೆ ಅವರ ಮಕ್ಕಳನ್ನು ಪೌರತ್ವ ಸಾಬೀತು ಪಡಿಸಲು ಆಗದ ಪರಿಸ್ಥಿತಿಯಲ್ಲಿ ಅರುವತ್ತು ಮಕ್ಕಳನ್ನು ಬಯಲು ಬಂದೀಖಾನೆಗೆ ಹಾಕಲಾಗಿದೆ ಎಂದು ಅರ್ಜಿಯಲ್ಲಿ ತಿಳಿಸಲಾಗಿತ್ತು. ಚೀಫ್ ಜಸ್ಟಿಸ್ ಎಸ್ ಎ ಬೊಬ್ಡೆ ಅಧ್ಯಕ್ಷತೆಯ ಪೀಠ ಅರ್ಜಿಯಲ್ಲಿ ವಿಚಾರಣೆ ನಡೆಸಿದೆ.
ಮಕ್ಕಳ ಪೌರತ್ವ ಸಾಬೀತು ಪಡಿಸಲು ಆಗದಿದ್ದರೂ ಅವರ ತಂದೆ ತಾಯಿಗಳ ಜೊತೆಯೇ ಇರಿಸುತ್ತೇವೆ. ಅವರನ್ನು ಡಿಟೆನ್ಶನ್ ಸೆಂಟರಿಗೆ ಕಳುಹಿಸಲು ತೀರ್ಮಾನಿಸಿಲ್ಲ ಎಂದು ಕೆ ಕೆ ವೇಣುಗೋಪಾಲ್ ಸುಪ್ರೀಂಕೋರ್ಟಿಗೆ ತಿಳಿಸಿದರು. ವಿಷಯದಲ್ಲಿ ನಾಲ್ಕು ವಾರದೊಳಗೆ ಅಫಿದಾವಿತ್ ಸಲ್ಲಿಸುವಂತೆ ಚೀಫ್ ಜಸ್ಟಿಸ್ ಆದೇಶ ನೀಡಿದ್ದಾರೆ.












