ಲೋಕಸಭಾ ಚುನಾವಣೆಗೆ ಮೊದಲು ಸಿಎಎ ಜಾರಿ: ಅಮಿತ್ ಶಾ

0
83

ಸನ್ಮಾರ್ಗ ವಾರ್ತೆ

ಸಂಸತ್ತಿನಲ್ಲಿ 2019ರಲ್ಲಿ ಮಂಜೂರು ಮಾಡಲಾದ ಪೌರತ್ವ ತಿದ್ದುಪಡಿ ಕಾಯ್ದೆ ಸಿಎಎ 2024 ಲೋಕಸಭಾ ಚುನಾವಣೆಗೆ ಮೊದಲೇ ಅನುಷ್ಠಾನವಾಗಲಿದೆ ಎಂದು ಕೇಂದ್ರ ಗೃಹಸಚಿವ ಅಮಿತ್ ಶಾ ಶನಿವಾರ ತಿಳಿಸಿದ್ದಾರೆ. ಕಾಂಗ್ರೆಸ್ ಸ್ವತಃ ಸಿಎಎ ಅನುಷ್ಠಾನದ ಆಶ್ವಾಸನೆ ನೀಡಿ ಇದೀಗ ಹಿಂದೆ ಸರಿದಿದೆ ಎಂದು ಗೃಹ ಸಚಿವರು ಆರೋಪಿಸಿದ್ದಾರೆ.

ಬಾಂಗ್ಲಾದೇಶ ಮತ್ತು ಪಾಕಿಸ್ತಾನದಿಂದ ಆಗಮಿಸುವ ನಿರಾಶ್ರಿತರಿಗೆ ಪೌರತ್ವ ನೀಡಲು ಸಿಎಎ ಕಾಯ್ದೆ ರಚಿಸಲಾಗಿದೆ. ಯಾವುದೇ ಸಮುದಾಯದ ಪೌರತ್ವ ಹಕ್ಕನ್ನು ಕಸಿದುಕೊಳ್ಳುವ ಸೌಲಭ್ಯವನ್ನು ಸಿಎಎ ಹೊಂದಿಲ್ಲ. ನಮ್ಮ ದೇಶದಲ್ಲಿ ಅಲ್ಪಸಂಖ್ಯಾತರನ್ನು ಮತ್ತು ಮುಖ್ಯವಾಗಿ ಮುಸ್ಲಿಂ ಸಮುದಾಯವನ್ನು ಪ್ರಚೋದಿಸಲಾಗುತ್ತಿದೆ ಎಂದು ಅವರು ಆರೋಪಿಸಿದ್ದಾರೆ.

“ಸಿಎಎ ಕಾಂಗ್ರೆಸ್ ಸರ್ಕಾರದ ಭರವಸೆ. ದೇಶವನ್ನು ವಿಭಜಿಸಿದಾಗ ಆ ದೇಶಗಳಲ್ಲಿ ಅಲ್ಪಸಂಖ್ಯಾತರ ಮೇಲೆ ದೌರ್ಜನ್ಯ ನಡೆದಾಗ ಕಾಂಗ್ರೆಸ್ ನಿರಾಶ್ರಿತರನ್ನು ಭಾರತಕ್ಕೆ ಸ್ವಾಗತಿಸುವ ಮತ್ತು ಭಾರತೀಯ ಪೌರತ್ವ ನೀಡುವ ಭರವಸೆ ನೀಡಿತ್ತು” ಎಂದು ಅಮಿತ್ ಶಾ ಹೇಳಿದ್ದಾರೆ.

ಇತರ ದೇಶಗಳಲ್ಲಿ ದೌರ್ಜನ್ಯ ಎದುರಿಸುತ್ತಿರುವ ಮುಸ್ಲಿಮೇತರ ವಲಸಿಗರಾದ ಹಿಂದೂಗಳು, ಸಿಖ್ಖರು, ಜೈನರು, ಬೌದ್ಧಮತೀಯರು, ಪಾರ್ಸಿಗಳು ಹಾಗೂ ಕ್ರಿಶ್ಚಿಯನ್ನರಿಗೆ ಭಾರತೀಯ ಪೌರತ್ವ ನೀಡುವ ಉದ್ದೇಶವನ್ನು ಸಿಎಎ ಹೊಂದಿದೆ ಎಂದು ಅವರು ಸಿಎಎ ಜಾರಿಯನ್ನು ಸಮರ್ಥಿಸಿಕೊಂಡಿದ್ದಾರೆ.

LEAVE A REPLY

Please enter your comment!
Please enter your name here