ಸದ್ಭಾವನಾ ವೇದಿಕೆಯಿಂದ ರಾಷ್ಟ್ರಪತಿಗಳಿಗೆ ಮನವಿ, ಮೊ೦ಬತ್ತಿ ಪ್ರತಿಭಟನೆ

0
487

ಮಂಗಳೂರು, ಮೇ ೩: ಶ್ರೀಲಂಕಾದಲ್ಲಿ ಇತ್ತೀಚಿಗೆ ನಡೆದ ಬಾಂಬ್ ಸ್ಫೋಟ ಕೃತ್ಯವನ್ನು ಖಂಡಿಸಿ ಸದ್ಭಾವನಾ ವೇದಿಕೆ ಜೆಪ್ಪು ವರ್ತುಲದ ವತಿಯಿಂದ ದ ಕ ಜಿಲ್ಲಾಧಿಕಾರಿ ಮೂಲಕ ರಾಷ್ಟ್ರಪತಿಗಳಿಗೆ ಮನವಿ ಸಲ್ಲಿಸಲಾಯಿತು ಮತ್ತು ಜೆಪ್ಪುವಿನ ಮಾರ್ನಮಿಕಟ್ಟೆ ಸರ್ಕಲ್ ನಲ್ಲಿ ಮೊ೦ಬತ್ತಿ ಪ್ರತಿಭಟನೆ ನಡೆಸಲಾಯಿತು.

ರಾಷ್ಟ್ರಪತಿಗಳಿಗೆ ಸಲ್ಲಿಸಲಾದ ಮನವಿಯಲ್ಲಿ, ಸ್ಫೋಟ ಕೃತ್ಯವನ್ನು ಖಂಡಿಸಲಾಗಿದೆಯಲ್ಲದೆ, ವಿವಿಧ ಸಮುದಾಯಗಳ ಪ್ರತಿನಿಧಿಗಳನ್ನೊಳಗೊಂಡ ಉನ್ನತ ಮಟ್ಟದ ನಿಯೋಗವೊಂದನ್ನು ಶ್ರೀಲಂಕಾಕ್ಕೆ ಕಳುಹಿಸಿ ನಮ್ಮ ಒಗ್ಗಟ್ಟನ್ನು ಪ್ರದರ್ಶಿಸಬೇಕು ಮತ್ತು ಸಂತ್ರಸ್ತ ಕುಟುಂಬಗಳಿಗೆ ಸಾಂತ್ವನವನ್ನು ಸಲ್ಲಿಸಬೇಕು ಎಂದು ಕೋರಲಾಗಿದೆ.
ಮೊ೦ಬತ್ತಿ ಪ್ರತಿಭಟನೆಯನ್ನು ಉದ್ದೇಶಿಸಿ ವೇದಿಕೆಯ ಅಧ್ಯಕ್ಷ ಎಂ ವಿ ಸುರೇಶ್, ಫಾದರ್ ಮೈಕಲ್ ಸಂತುಮಯರ್ ಮತ್ತು ಏ ಕೆ ಕುಕ್ಕಿಲ ಅವರು ಮಾತಾಡಿದರು. ವೇದಿಕೆಯ ಸದಸ್ಯರಾದ ಜೆ ವಿ ಡಿಮೆಲ್ಲೋ ಪ್ರಾಸ್ತಾವಿಕವಾಗಿ ಮಾತಾಡಿದರು. ಸದಸ್ಯರಾದ ಅಬ್ದುಲ್ ಗಫೂರ್ ಕಾರ್ಯಕ್ರಮ ನಿರೂಪಿಸಿದರು. ಸ್ಪೋಟದಲ್ಲಿ ಸಾವಿಗೀಡಾದವರ ಸ್ಮರಣಾರ್ಥ ಒಂದು ನಿಮಿಷಗಳ ಕಾಲ ಮೌನ ಪ್ರಾರ್ಥನೆ ಸಲ್ಲಿಸಲಾಯಿತು.