ಇ.ಡಿ, ಸಿಬಿಐ ಅನ್ನು ಗಡಿ ಸಂರಕ್ಷಣೆಗೆ ಕಳುಹಿಸಬೇಕು: ಶಿವಸೇನೆ

0
543

ಸನ್ಮಾರ್ಗ ವಾರ್ತೆ

ಮುಂಬೈ: ಗಡಿಗಳಲ್ಲಿ ಭಯೋತ್ಪಾದಕರ ಒಳನುಸುಳುವಿಕೆಯನ್ನು ನಿಭಾಯಿಸಲು ಜಾರಿ ನಿರ್ದೇಶನಾಲಯ(ಇ.ಡಿ) ಮತ್ತು ಕೇಂದ್ರ ತನಿಖಾ ದಳವನ್ನು ಕಳುಹಿಸಬೇಕು ಎಂದು ಶಿವಸೇನೆ ತಿಳಿಸಿದೆ.

“ದೆಹಲಿಯ ಗಡಿಯಲ್ಲಿ, ನಮ್ಮ ರೈತರನ್ನು ‘ಭಯೋತ್ಪಾದಕರು’ ಎಂದು ಕರೆಯಲಾಗುತ್ತಿದೆ. ಆದರೆ, ನೈಜ ಭಯೋತ್ಪಾದಕರು ಕಾಶ್ಮೀರ ಗಡಿ ಮತ್ತು ಲಡಾಖ್‌ಗೆ ಪ್ರವೇಶಿಸುತ್ತಿದ್ದಾರೆ. ಇಂತಹ ಸಮಯದಲ್ಲಿ, ಇಡಿ ಮತ್ತು ಸಿಬಿಐ ಅನ್ನು ಗಡಿ ಸಂರಕ್ಷಣೆಗಾಗಿ ಕಳುಹಿಸಬೇಕು” ಎಂದು ಸೇನಾ ತನ್ನ ಮುಖವಾಣಿ ಸಾಮ್ನಾದ ಸಂಪಾದಕೀಯದಲ್ಲಿ ತಿಳಿಸಿದೆ.