ರೈತರಿಗೆ ಬೆಂಬಲ ಸೂಚಿಸಿದ ಭೀಮ್ ಆರ್ಮಿ

0
453

ಸನ್ಮಾರ್ಗ ವಾರ್ತೆ

ಹೊಸದಿಲ್ಲಿ,ಡಿ.1:ರೈತ ಪ್ರತಿಭಟನೆಗೆ ಭೀಮ್ ಆರ್ಮಿ ಬೆಂಬಲ ಸೂಚಿಸಿದ್ದು ಚಂದ್ರಶೇಖರ್ ಆಝಾದ್ ನೇತೃತ್ವದಲ್ಲಿ ರೈತ ಹೋರಾಟದಲ್ಲಿ ಭೀಮ್ ಆರ್ಮಿ ಪ್ರತಿಭಟನೆಯಲ್ಲಿ ಭಾಗವಹಿಸಲಿದೆ. ದಿಲ್ಲಿ-ಹರಿಯಾಣ ಗಡಿಯಲ್ಲಿ 500 ರೈತ ಸಂಘಟನೆಯ ನೇತೃತ್ವದಲ್ಲಿ ನಡೆಯುತ್ತಿರುವ ಹೋರಾಟ ಆರನೇ ದಿನಕ್ಕೆ ಕಾಲಿಟ್ಟಿದೆ.

ರೈತರು ಅವರಿಗಾಗಿ ಅಲ್ಲ. ಮುಂದಿನ ತಲೆಮಾರಿಗಾಗಿ ಹೋರಾಡುತ್ತಿದ್ದಾರೆ. ಭೀಮ್ ಆರ್ಮಿ, ರೈತರಿಗೆ ಎಲ್ಲ ರೀತಿಯ ಬೆಂಬಲವನ್ನು ಸಂರಕ್ಷಣೆಯನ್ನು ನೀಡುವುದು ಎಂದು ಕಳೆದ ದಿವಸ ಚಂದ್ರ ಶೇಖರ್ ವೀಡಿಯೊ ಸಂದೇಶದಲ್ಲಿ ತಿಳಿಸಿದ್ದರು.

ರವಿವಾರ ದಿಲ್ಲಿ-ಗಾಝಿಯಾಬಾದ್ ಗಡಿಯಲ್ಲಿ ನಡೆದ ರೈತರ ಪ್ರತಿಭಟನೆಯಲ್ಲಿ ಭೀಮ್ ಆರ್ಮಿ ಕಾರ್ಯಕರ್ತರು ಭಾಗಿಯಾಗಿದ್ದರು. ನೂರಾರು ಭೀಮ್ ಆರ್ಮಿ ಕಾರ್ಯಕರ್ತರು ಪ್ಲೈ ಓವರ್‌ನ ಕೆಳಗೆ ಧರಣಿಯಲ್ಲಿ ಕುಳಿತು ಮೋದಿ ಸರಕಾರದ ವಿರುದ್ಧ ಘೋಷಣೆ ಕೂಗಿದೆ.  ರೈತರು, ಬಡವರು, ದಲಿತರ ವಿರುದ್ಧ ಮೋದಿ ಸರಕಾರ ಇದೆ ಎಂದು ಭೀಮ್ ಆರ್ಮಿ ಕಾರ್ಯಕರ್ತರು ಹೇಳಿದ್ದು ಹೊಸ ರೈತ ಕಾನೂನುಗಳನ್ನು ರದ್ದುಪಡಿಸುವವರೆಗೆ ಪ್ರತಿಭಟಿಸುವುದಾಗಿ ಹೇಳಿದ್ದಾರೆ.

ಇದೇವೇಳೇ, ಕೇಂದ್ರ ಸರಕಾರದ ದಮನಕ್ಕೆ ತಲೆ ಬಾಗಲು ರೈತರು ಸಿದ್ಧರಿಲ್ಲ. ಬೇಡಿಕೆ ಈಡೇರಿದ ಮೇಲೆಯೇ ಹೋರಾಟ ಕೊನೆಗೊಳಿಸಲಾಗುವುದು ಎಂದು ರೈತರು ಹೇಳಿದ್ದಾರೆ. ದಿಲ್ಲಿಯ ಎಲ್ಲ ಗಡಿಯ ಮಾರ್ಗಗಲ್ಲಿ ತಡೆ ನಿರ್ಮಿಸಿ ಹೋರಾಟ ನಡೆಸುವುದಕ್ಕೆ ರೈತರು ನಿರ್ಧರಿಸಿದ್ದಾರೆ.