ಸನ್ಮಾರ್ಗ ವಾರ್ತೆ
ಹೊಸದಿಲ್ಲಿ: ಖಾಸಗಿ ಮೆಡಿಕಲ್ ಕಾಲೇಜಿಗೆ ಅನುಕೂಲಕರ ತೀರ್ಪು ನೀಡಲು ಲಂಚ ಪಡೆದ ಪ್ರಕರಣದಲ್ಲಿ ಸಿಬಿಐ ಆರೋಪ ಪಟ್ಟಿ ಸಲ್ಲಿಸಿದೆ. ಖಾಸಗಿ ಮೆಡಿಕಲ್ ಕಾಲೇಜಿನ ಪ್ರವೇಶಾತಿ ಸರಕಾರ ತಡೆಹಿಡಿದಾಗ ಅನುಕೂಲಕರ ತೀರ್ಪು ನೀಡಲು ಜಡ್ಜ್ ಲಂಚ ಪಡೆದರು ಎಂದು ಪ್ರಕರಣ ದಾಖಲಾಗಿತ್ತು. ಅಲಹಾಬಾದ್ ಮಾಜಿ ಹೈಕೋರ್ಟ್ ಜಡ್ಜ್ ಜಸ್ಟಿಸ್ ನಾರಾಯಣ್ ಶುಕ್ಲಾರ ವಿರುದ್ಧ ಸಿಬಿಐ ಆರೋಪ ಪಟ್ಟಿ ಸಲ್ಲಿಸಿತು.
ಛತ್ತೀಸ್ ಗಡ ಹೈಕೋರ್ಟಿನಮಾಜಿ ಜಡ್ಜ್ ಐ ಎಂ ಖುದ್ದೂಸಿಯವರ ಹೆಸರು ಆರೋಪ ಪಟ್ಟಿಯಲ್ಲಿದೆ. ಪ್ರಸಾದ್ ಇನ್ಸಿಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್ನಲ್ಲಿ ಎಡು ವರ್ಷ ವಿದ್ಯಾರ್ಥಿ ಪ್ರವೇಶವನ್ನು 2017ರಲ್ಲಿ ಕೇಂದ್ರ ಸರಕಾರ ತಡೆದು ಆದೇಶ ಹೊರಡಿಸಿತ್ತು. 46 ಮೆಡಿಕಲ್ ಕಾಲೇಜುಗಳ ಪ್ರವೇಶ ಅದೇ ವರ್ಷ ತಡೆಹಿಡಿಯಲಾಗಿತ್ತು. ನಂತರ ಗೂಢಾಲೋಚನೆಯು ನಡೆದಿದ್ದು 2017ರ ಎಪ್ರಿಲ್ 24ಕ್ಕೆ ಅಲಾಹಾಬಾದ್ ಹೈಕೋರ್ಟುನಲ್ಲಿ ಪ್ರಸಾದ್ ಇನ್ಸಿಟಿಟಯೂಟ್ ಮ್ಯಾನೇಜ್ಮೆಂಟ್ ಅರ್ಜಿ ಸಲ್ಲಿಸಿತ್ತು. ಜಸ್ಟಿಸ್ ಶುಕ್ಲ ಮ್ಯಾನೇಜಮೆಂಟ್ಗೆ ಅನುಕೂಲಕರವಾಗಿ ತೀರ್ಪು ಹೊರಡಿಸಿದ್ದರು.
ಇದರ ತನಿಖೆಗೆ ಸುಪ್ರೀಂ ಕೋರ್ಟ್ ಚೀಫ್ ಜಸ್ಟಿಸ್ ಮೂರು ಮಂದಿಯ ಸಮಿತಿಯನ್ನು ನಿಯೋಜಿಸಿತ್ತು. ಮದ್ರಾಸ್ ಹೈಕೋರ್ಟ್ ಚೀಫ್ ಜಸ್ಟಿಸ್ ಪಿ.ಕೆ ಜೈಸ್ವಾಲ್ ಮುಂತಾದವರು ಸಮಿತಿಯಲ್ಲಿದ್ದರು. ಸಮಿತಿ ಜಸ್ಟಿಸ್ ಶುಕ್ಲರವರು ತಪ್ಪಿತಸ್ಥರು ಎಂದು ತೀರ್ಮಾನಿಸಿತ್ತು. ಮ್ಯಾನೇಜ್ಮೆಂಟ್ ಪ್ರತಿನಿಧಿಗಳು ಜಸ್ಟಿಸ್ ಖುದ್ದೂಸಿ ಮೂಲಕ ಜಡ್ಜ್ ನಾರಾಯಣ್ ಶುಕ್ಲರ ಮೂಲಕ ಅನುಕೂಲಕರ ತೀರ್ಪು ಪಡೆಯಲು ಲಂಚ ನೀಡಿತ್ತು ಎಂದು ಪ್ರಕರಣ ಇದೆ. 2019 ಡಿಸೆಂಬರಿನಲ್ಲಿ ಸಿಬಿಐ ಜಸ್ಟಿಸ್ ಶುಕ್ಲರನ್ನು ಬಂಧಿಸಲಾಗಿತ್ತು.
ಎಫ್ಐಆರ್ ನಲ್ಲಿ ಜಸ್ಟಿಸ್ ಶುಕ್ಲ, ಮಾಜಿ ಜಡ್ಜ್ ಐಎಂ ಖುದ್ದೂಸಿ, ಪ್ರಸಾದ್ ಎಜುಕೇಶನ್ನ ಪ್ರಸಾದ್ ಯಾದವ್, ಪಲಾಶ್ ಯಾದವ್ ,ಭಾವನಾ ಪಾಂಟೆ, ಸುಧೀರ್ ಗಿರಿ ಮತ್ತು ಇತರರು ಆರೋಪಿಗಳಾಗಿದ್ದಾರೆ.












