ನೀಟ್ ಗ್ರೇಸ್ ಅಂಕ ಪಡೆದ 1,563 ಅಭ್ಯರ್ಥಿಗಳ ಅಂಕ ಪಟ್ಟಿ ರದ್ದುಪಡಿಸುವುದಾಗಿ ಸುಪ್ರೀಮ್ ಗೆ ತಿಳಿಸಿದ ಕೇಂದ್ರ ಸರಕಾರ

0
186

ಸನ್ಮಾರ್ಗ ವಾರ್ತೆ

ವಿವಾದಾತ್ಮಕ ಗ್ರೇಸ್ ಅಂಕಗಳನ್ನು ನೀಡಿದ 1563 ಅಭ್ಯರ್ಥಿಗಳ 2024ರ NEET ಅಂಕಪಟ್ಟಿಗಳನ್ನು ರದ್ದುಗೊಳಿಸಲು ನಿರ್ಧರಿಸಲಾಗಿದೆ ಎಂದು ಕೇಂದ್ರ ಸರ್ಕಾರವು ಸುಪ್ರೀಂ ಕೋರ್ಟ್‌ಗೆ ತಿಳಿಸಿದೆ.

ಈ ವಿದ್ಯಾರ್ಥಿಗಳಿಗೆ ಅವರ ಅಂಕಗಳನ್ನು (ಗ್ರೇಸ್ ಅಂಕಗಳಿಲ್ಲದೆ) ತಿಳಿಸಲಾಗುವುದು ಮತ್ತು ಮರು ಪರೀಕ್ಷೆಯನ್ನು ಬರೆಯುವ ಅವಕಾಶವನ್ನು ನೀಡಲಾಗುವುದು ಎಂದು ಸರ್ಕಾರವು ಸುಪ್ರೀಂ ಕೋರ್ಟ್‌ಗೆ ತಿಳಿಸಿದೆ.

ಮರು ಪರೀಕ್ಷೆ ಬರೆಯಲು ಇಚ್ಛಿಸದ ವಿದ್ಯಾರ್ಥಿಗಳಿಗೆ, ಮೇ 5 ರಂದು ನಡೆದ ಪರೀಕ್ಷೆಯ ಆಧಾರದ ಮೇಲೆ ಅವರ ಅಂಕಗಳನ್ನು ಗಣನೆಗೆ ತೆಗೆದುಕೊಳ್ಳಲಾಗುತ್ತದೆ ಎಂದು ತಿಳಿಸಿದೆ.

ಜೂನ್ 23 ರಂದು ಮರು ಪರೀಕ್ಷೆ ನಡೆಸಲಾಗುವುದು ಮತ್ತು ಜೂನ್ 30 ರ ಒಳಗಾಗಿ ಫಲಿತಾಂಶಗಳನ್ನು ಪ್ರಕಟಿಸಲಾಗುವುದು ಎಂದು ನ್ಯಾಷನಲ್ ಟೆಸ್ಟಿಂಗ್ ಏಜೆನ್ಸಿ (ಎನ್‌ಟಿಎ) ಸುಪ್ರೀಂ ಕೋರ್ಟ್‌ಗೆ ತಿಳಿಸಿದೆ.

ಗ್ರೇಸ್ ಅಂಕ ರದ್ದುಪಡಿಸುವಂತೆ ತೆಲಂಗಾಣದ ಅಬ್ದುಲ್ಲಾ ಮೊಹಮ್ಮದ್ ಫೈಜ್ ಮತ್ತು ಆಂಧ್ರಪ್ರದೇಶದ ಡಾ. ಶೇಕ್ ರೋಶನ್ ಮೊಹಿದ್ದೀನ್ ಅವರು ಸುಪ್ರೀಂ ಕೋರ್ಟ್ ನಲ್ಲಿ ಅರ್ಜಿ ಸಲ್ಲಿಸಿದ್ದು, ಇವರು SIO ವಿದ್ಯಾರ್ಥಿ ಸಂಘಟನೆಯನ್ನು ಪ್ರತಿನಿಧಿಸುತ್ತಿದ್ದಾರೆ.

https://x.com/ANI/status/1801130233535320106?t=VE1CFyqWYbvAzeN7xE5-Sg&s=19