ಕೇಂದ್ರ ಸರಕಾರದಿಂದ ವಾಟ್ಸಪ್‍ಗೆ ಬದಲಿ ಸ್ವದೇಶಿ ಆ್ಯಪ್ ‘ಸಂದೇಶ್’

0
550

ಸನ್ಮಾರ್ಗ ವಾರ್ತೆ

ಹೊಸದಿಲ್ಲಿ: ವಾಟ್ಸಪ್‍ಗೆ ಬದಲಿಯಾಗಿ ಮೆಸೇಜಿಂಗ್ ಆಪ್ಲಿಕೇಶನ್ ಸಂದೇಶ್ ಅನ್ನು ಕೇಂದ್ರ ಸರಕಾರ ಹೊರತಂದಿದೆ. ಲೋಕಸಭೆಯಲ್ಲಿ ಕೇಂದ್ರದ ಐಟಿ ಇಲೆಕ್ಟ್ರಾನಿಕ್ಸ್ ಸಹ ಸಚಿವ ರಾಜೀವ್ ಚಂದ್ರ ಶೇಖರ್ ಲೋಕಸಭೆಯಲ್ಲಿ ತಿಳಿಸಿದ್ದು ಟ್ವಿಟರ್‌ಗೆ ಬದಲಿಯಾಗಿ ಕ್ಯೂ ಆಪ್ ಬಳಕೆಯನ್ನು ಪರಿಚಯಿಸಲಾಗಿದೆ. ಡಿಜಿಟಲ್ ಇಂಡಿಯಾ ಯೋಜನೆಯ ಭಾಗವಾಗಿ ವಾಟ್ಸಪ್‍ಗೆ ಒಂದು ಬದಲಿ ಆಪ್‌ಅನ್ನು ಹೊರತರಲಾಗುವುದು ಎಂದು ಕಳೆದ ವರ್ಷ ಕೇಂದ್ರ ಸರಕಾರ ಘೋಷಿಸಿತ್ತು.

ಇಲೆಕ್ಟ್ರಾನಿಕ್ಸ್ ಆಂಡ್ ಇನ್ಫಾರ್ಮೇಶನ್ ಟೆಕ್ನಾಲಜಿ ಸಚಿವಾಲಯದ ಅಧೀನದ ನ್ಯಾಶನಲ್ ಇನ್‍ಫಾರ್ಮೇಟಿಕ್ಸ್ ಸೆಂಟರ್(ಎನ್‍ಐಸಿ) ಆ್ಯಪ್ ಅನ್ನು ತಯಾರಿಸಿದೆ. ಸರಕಾರ ಐಟಿ ಸೇವೆಗಳನ್ನು ಮತ್ತು ಡಿಜಿಟಲ್ ಇಂಡಿದಯ ಕೆಲವು ಉಪಲಬ್ಧಿಗಳನ್ನು ವಿತರಿಸಲು ಮೂಲ ಸೌಕರ್ಯಗಳನ್ನು ಎನ್‍ಐಸಿ ಒದಗಿಸುತ್ತಿದೆ.

ಮೊಬೈಲ್ ನಂಬರ್, ಇಮೇಲ್ ಐಡಿ ಉಪಯೋಗಿಸಿ ಫ್ಲಾಟ್‍ಫಾರ್ಮನ್ನು ಉಪಯೋಗಿಸಬಹುದಾಗಿದೆ. ಸುರಕ್ಷೆಯ ಬೆದರಿಕೆಯಿರುವ ವಾಟ್ಸಪ್ ನಂತಹ ಸಾಮಾಜಿಕ ಮಾಧ್ಯಮ ನೆಟ್‍ವರ್ಕ್‌ಗಳಿಂದ ಸಂರಕ್ಷಿಸುವ ಭಾಗವಾಗಿ ಸರಕಾರಿ ಸಿಬ್ಬಂದಿಗಳು ಆಪ್ ಉಪಯೋಗಿಸುತ್ತಿದ್ದಾರೆ. ಈಗ ವಿವಿಧ ಸಚಿವಾಲಯದ ಉದ್ಯೋಗಿಗಳು ಮೆಸೇಜುಗಳನ್ನು ಕಳುಹಿಸಲು ಹೊಸ ಫ್ಲಾಟ್‍ಫಾರ್ಮನ್ನು ಉಪಯೋಗಿಸತೊಡಗಿದ್ದಾರೆ.

ಐಒಎಸ್ ಆಂಡ್ರಾಯಿಡ್ ಫ್ಲಾಟ್‍ ಫಾರ್ಮುಗಳಲ್ಲಿ ಸಂದೇಶ್ ಆಪ್ ಉಪಯೋಗಿಸಲು ಆಗುತ್ತದೆ. ಇತರ ಚ್ಯಾಟಿಂಗ್ ಅಪ್ಲಿಕೇಶನ್‍ಗಳಂತೆ ಧ್ವನಿ ಸಂದೇಶಗಳನ್ನು ಮತ್ತು ಡಾಟ ಸಂದೇಶಗಳು ಕೂಡ ಲಭ್ಯವಿದೆ. ವಾಟ್ಸಪ್‍ನಲ್ಲಿರುವಂತೆ ಎಂಡ್ ಟು ಎಂಡ್ ಎನ್‍ಕ್ರಿಪ್ಶನ್ ಬೆಂಬಲವೂ ಸಂದೇಶ್‍ನಲ್ಲಿದೆ. ಆಪ್‍ಗೆ ಬೇಕಿರುವ ಸರ್ವರ್ ಭಾರತದೊಳಗಿರುತ್ತದೆ. ಅದರ ವಿವರಗಳು ಸರಕಾರದ ಅಧೀನದ ಕ್ಲೌಡ್ ಸ್ಟೋರೇಜ್ ವ್ಯವಸ್ಥೆಯಲ್ಲಿ ಜೋಪಾನವಾಗಿಡಲಾಗುತ್ತದೆ.

ಡಾಟ ಸೆಂಟರ್‌ಗಳು ಆಕ್ಸಿಸ್ ಮಾಡಲು ಅಧಿಕಾರಿಗಳಿಗೆ ಮಾತ್ರ ಸಾಧ್ಯವಿದೆ. ಸಂದೇಶ್‍ನ ಆಂಡ್ರಾಯಿಡ್ ರೂಪಾಂತರ ಆಂಡ್ರಾಯಿಡ್ ಕಿಟ್‍ಕ್ಯಾಟ್ ಮುಂತಾದ ಫೋನ್‍ಗಳಲ್ಲಿ ಮಾತ್ರ ಲಭಿಸಲಿದೆ. ಐಒಎಸ್ ಐಫೋನ್‍ಗಳಲ್ಲಿ ಮಾತ್ರ ಸಂದೇಶ್ ಆಪ್ ಬಳಸಲು ಸಾಧ್ಯವಾಗುತ್ತದೆ.