12ನೇ ಸಲ ಕೋವಿಡ್ ಲಸಿಕೆ ತೆಗೆದುಕೊಳ್ಳುವಾಗ ಅಧಿಕಾರಿಗಳ ಕೈಗೆ ಸಿಕ್ಕಿಬಿದ್ದ 84ರ ವೃದ್ಧ…!

0
539

ಈತ ಅಂಚೆ ಇಲಾಖೆಯ ನಿವೃತ್ತ ಸಿಬ್ಬಂದಿ: ಲಸಿಕೆ ಪಡೆಯಲು ಕಾರಣ ಏನು ಗೊತ್ತಾ?

ಸನ್ಮಾರ್ಗ ವಾರ್ತೆ

ಪಾಟ್ನಾ: ಕೊರೋನ ಪ್ರತಿರೋಧ ವ್ಯಾಕ್ಸಿನ್ ಎರಡನೇ ಡೋಸ್ ಸಿಗದವರು ಬಹಳ ಮಂದಿ ಇದ್ದರೂ ಹನ್ನೊಂದು ಬಾರಿ ಲಸಿಕೆ ಹಾಕಿಸಿಕೊಂಡ ಬಿಹಾರದ ಮಾಧೇಪುರ ಜಿಲ್ಲೆ ಒರೈಗ್ರಾಮದ ಮುದುಕ ಬ್ರಹ್ಮದೇವ್ ಮಂಡಲ್ ಎಂಬವರು ಹನ್ನೆರಡನೇ ಬಾರಿಗೆ ಲಸಿಕೆ ಹಾಕಿಸಿಕೊಳ್ಳಲು ಬಂದಾಗ ಅಧಿಕಾರಿಗಳ ಕೈಗೆ ಸಿಕ್ಕಿ ಬಿದ್ದ ಘಟನೆ ನಡೆದಿದೆ.

ಮುದುಕನ ವಿಚಿತ್ರ ಕೆಲಸವನ್ನು ಪತ್ತೆ ಹಚ್ಚಲು ಸರಕಾರ ತನಿಖೆಗೆ ಆದೇಶಿಸಿದೆ. ನನಗೆ ಲಸಿಕೆಯಿಂದ ತುಂಬಾ ಪ್ರಯೋಜನ ಸಿಕ್ಕಿತು. ಆದುದರಿಂದ ಅದನ್ನು ಪುನಃಪುನಃ ತೆಗೆದುಕೊಂಡೆ ಎಂದು ಅಂಚೆ ಇಲಾಖೆಯಿಂದ ನಿವೃತ್ತರಾಗಿರುವ ಬ್ರಹ್ಮದೇವ್ ‘ಇಂಡಿಯಾ ಟುಡೆ’ಗೆ ಹೇಳಿದರು.

2021 ಫೆಬ್ರುವರಿ 13ಕ್ಕೆ ಮೊದಲ ಡೋಸ್ ಪಡೆದರು. ಮಾರ್ಚ್,ಮೇ, ಜೂನ್, ಜುಲೈ, ಆಗಸ್ಟ್ ತಿಂಗಳಲ್ಲಿ ಒಂದೊಂದು. ಸೆಪ್ಟಂಬರಿನಲ್ಲಿ ಮೂರು ಬಾರಿ ಲಸಿಕೆ ಹಾಕಿಸಿದರು. ಡಿಸೆಂಬರ್ 30ರೊಳಗೆ ಆರೋಗ್ಯ ಕೇಂದ್ರಕ್ಕೆ ಹೋಗಿ ಹನ್ನೊಂದು ಡೋಸ್ ಲಸಿಕೆ ಪಡೆದುಕೊಂಡಿದ್ದಾರೆ.

ಲಸಿಕೆ ಪಡೆದ ನಂತರ ನನ್ನ ಮೊಣಕಾಲಿನ ಸಮಸ್ಯೆಗಳು ಕಡಿಮೆಯಾಗಿವೆ. ಅದಕ್ಕಾಗಿಯೇ ಅವರು ಹಲವಾರು ಬಾರಿ ಲಸಿಕೆ ಪಡೆದೆ ಎಂದು ಹೇಳಿರುವುದಾಗಿ ಡಿಎನ್ ಎ ವೆಬ್ ಸೈಟ್ ವರದಿ ಮಾಡಿದೆ. ಘಟನೆಯ ಕುರಿತು ತನಿಖೆ ನಡೆಸಲಾಗುತ್ತಿದೆ ಎಂದು ವೈದ್ಯಕೀಯ ಅಧಿಕಾರಿ ಡಾ ವಿನಯ್ ಕುಮಾರ್ ತಿಳಿಸಿದ್ದಾರೆ.

ವ್ಯಾಕ್ಸಿನ್‍ ಪಡೆಯಲು ಆಧಾರ್ ಕಾರ್ಡ್ ಫೋನ್ ನಂಬ್ರ ಎಂಟು ಸಲ ಕೊಟ್ಟಿದ್ದಾರೆ. ಉಳಿದ ಮೂರಕ್ಕೆ ತನ್ನ ಮತದಾರ ಗುರುತು ಚೀಟಿ, ಪತ್ನಿಯ ಫೋನ್ ನಂಬರ್ ಕೊಟ್ಟೆ ಎಂದು ಅವರು ಹೇಳಿದರು. ಇಷ್ಟು ಸಲ ಲಸಿಕೆ ಅವರಿಗೆ ಹೇಗೆ ಕೊಡಲಾಯಿತು, ಅಧಿಕಾರಿಗಳ ಗಮನಕ್ಕೆ ಯಾಕೆ ಬರದೇ ಹೋಯಿತು ಎಂದು ಈಗ ತನಿಖೆಗೆ ಸರಕಾರ ಆದೇಶಿಸಿದೆ.