ಸನ್ಮಾರ್ಗ ವಾರ್ತೆ
ಚೆನ್ನೈ,ಜೂ.10:ಕೊರೋನಾ ಪೀಡಿತನಿಗೆ ಚಿಕಿತ್ಸೆ ನೀಡುವುದು ತಡವಾಗಿದೆ ಎಂದು ಅರೋಪಿಸಿದ ಪತ್ರಕರ್ತನ ವಿರುದ್ಧ ಚೆನ್ನೈಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಹಿರಿಯ ಪತ್ರಕರ್ತರಾದ ವರದರಾಜನ್ರವರ ವಿರುದ್ಧ ಸಿಬಿಸಿಐಡಿ ಪ್ರಕರಣ ದಾಖಲಿಸಿಕೊಂಡಿದೆ.
ತಮಿಳ್ನಾಡಿನ ಆರೋಗ್ಯ ಸಚಿವ ಡಾ. ಪಿ.ವಿಜಯಭಾಸ್ಕರ್ ವಿರುದ್ಧ ವರದರಾಜ್ ಮಾತಾಡಿದ್ದರು. ನಿರಾಧಾರ ವಿಷಯಗಳನ್ನು ಪ್ರಚಾರ ಮಾಡಿದರೆ ಜೈಲಿಗಟ್ಟುವ ಕೆಲಸವಾಗಬಹುದು ಎಂದು ಸಚಿವ ಹೇಳಿದ್ದರು. ಸಾಂಕ್ರಾಮಿಕ ನಿಯಂತ್ರಣ ಕಾನೂನಡಿಯಲ್ಲಿ ಸುಳ್ಳು ಸುದ್ದಿ ಹರಡಿದ ಆರೋಪದಲ್ಲಿ ವರದರಾಜ್ನ ವಿರುದ್ಧ ಸಿಬಿಸಿಐಡಿ ಪ್ರಕರಣ ದಾಖಲಿಸಿಕೊಂಡಿದೆ.
ತಮಿಳ್ನಾಡು, ಕೊರೋನ ಪೀಡಿತ ಸಂಖ್ಯೆಯಲ್ಲಿ ದೇಶದಲ್ಲಿ ಎರಡನೆ ಸ್ಥಾನವನ್ನು ಹೊಂದಿದೆ. ಮೇ 3ರ ನಂತರದ ದಿನಗಳಲ್ಲಿ 1000ಕ್ಕೂ ಹೆಚ್ಚು ಕೊರೋನ ಪ್ರಕರಣಗಳು ವರದಿಯಾಗುತ್ತಿವೆ. ನಗರದಲ್ಲಿ ಸುಮಾರು ಹತ್ತಕ್ಕೂ ಹೆಚ್ಚು ಸಾವುಗಳು ಸಂಭವಿಸುತ್ತಿವೆ. ಚೆನ್ನೈಯಲ್ಲಿ 23,000ಕ್ಕೂ ಹೆಚ್ಚು ಸೋಂಕು ತಗಲಿದವರಿದ್ದು, 200ಕ್ಕೂ ಹೆಚ್ಚು ಮಂದಿ ಕೊರೋನಕ್ಕೆ ಬಲಿಯಾಗಿದ್ದಾರೆ. ಸರಕಾರ ಎಲ್ಲ ರೀತಿಯ ಪ್ರತಿರೋಧ ಕೆಲಸ ಮಾಡುತ್ತಿದ್ದೇವೆ ಎಂದು ವಾದಿಸುತ್ತಿದ್ದು ಆದರೂ ತಮಿಳ್ನಾಡಿನಲ್ಲಿ ಕೋವಿಡ್-19 ನಿಂದಾಗಿ ಹತರಾಗುತ್ತಿರುವ ಸಂಖ್ಯೆಯಲ್ಲಿ ಹಠಾತ್ ಏರಿಕೆಯಾಗಿದೆ.
ಓದುಗರೇ, ಸನ್ಮಾರ್ಗ ಫೇಸ್ಬುಕ್ ಪೇಜ್ನ್ನು ಲೈಕ್ ಮಾಡುವ ಮೂಲಕ ನಮ್ಮನ್ನು ಬೆಂಬಲಿಸಿ.












