ಸ್ವತಂತ್ರ ದೇಶ: ಟ್ರಂಪ್ ಯೋಜ‌ನೆಯನ್ನು ತಿರಸ್ಕರಿಸಿದ ಫೆಲಸ್ತೀನಿನಿಂದ ಹೊಸ ಯೋಜನೆ

0
574

ಸನ್ಮಾರ್ಗ ವಾರ್ತೆ

ರಮಲ್ಲ,ಜೂ.10: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್‍ರ ಮಧ್ಯಪ್ರಾಚ್ಯ ಯೋಜನೆಯನ್ನು ಫೆಲಸ್ತೀನ್ ಅಥಾರಿಟಿ ತಿರಸ್ಕರಿಸಿದ್ದು, ಅಂತಾರಾಷ್ಟ್ರೀಯ ಮಧ್ಯಸ್ಥಿಕೆದಾರರ ಮುಂದೆ ತನ್ನ ಹೊಸ ಯೋಜನೆಯನ್ನು ಸಲ್ಲಿಸಿದೆ. ಇಸ್ರೇಲಿನ ಅತಿಕ್ರಮಣದಲ್ಲಿರುವ ವೆಸ್ಟ್‌ಬ್ಯಾಂಕ್ ,ಪೂರ್ವ ಜೆರುಸಲೇಂ,ಗಾಝಾ ಸಹಿತ ಸೈನಿಕ ನಿಯಂತ್ರಣವಿಲ್ಲದ ಸಾರ್ವಭೌಮ ದೇಶ ಎಂಬುದು ಅಥಾರಿಟಿಯ ಹೊಸ ಯೋಜನೆಯಾಗಿದೆ.

ವಿದೇಶಿ ಮಧ್ಯಸ್ಥಿಕೆದಾರರೊಂದಿಗೆ ಫೆಲಸ್ತೀನ್ ಪ್ರಧಾನಿ ಮುಹಮ್ಮದ್ ಇಶ್ತಯ್ಯ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಹೊಸ ಯೋಜನೆ ಮಂಡಿಸಿದರು. ಸ್ವತಂತ್ರ, ಸಾರ್ವಭೌಮ ಸೈನಿಕ ನಿಯಂತ್ರಣವಿಲ್ಲದ ಪೂರ್ವ ಜೆರುಸಲೇಂ ರಾಜಧಾನಿಯಾದ ಫೆಲಸ್ತೀನ್ ದೇಶ ಯೋಜನೆಯಲ್ಲಿದೆ. ಫೆಲಸ್ತೀನ್,ಇಸ್ರೇಲ್ ಗಡಿ ಸುಧಾರಣೆ, ಭೂ ಹಸ್ತಾಂತರ ಯೋಜನೆಯಿದೆಂದು ಮುಹಮ್ಮದ್ ತಯ್ಯಿಹ್ ತಿಳಿಸಿದರು.

ವಿಶ್ವಸಂಸ್ಥೆ, ಯುರೋಪಿಯನ್ ಯೂನಿಯನ್, ಅಮೆರಿಕ, ರಷ್ಯ ಸಹಿತ ದೇಶಗಳ ಸಾರ್ವಜನಿಕ ವೇದಿಕೆ ಫೆಲಸ್ತೀನ್, ಇಸ್ರೇಲಿನ ನಡುವಿನ ಶಾಂತಿ ಚರ್ಚೆಯನ್ನು ನಡೆಸುತ್ತಿದೆ. ವೆಸ್ಟ್‌ಬ್ಯಾಂಕಿನ ಜೋರ್ಡಾನ್ ಕಣಿವೆಯ ಅನಧಿಕೃತ ವಸತಿ ನಿರ್ಮಾಣಗಳಿಗೆ ಅನುಮತಿ ನೀಡವ ರೀತಿಯಲ್ಲಿ ಟ್ರಂಪ್ ಯೋಜನೆ ತಯಾರಿಸಿ ವಿವಾದ ಸೃಷ್ಟಿಸಿದ್ದರು. ಟ್ರಂಪ್‍ರ ಯೋಜನೆಯನ್ನು ಫೆಲಸ್ತೀನ್ ಅಥಾರಿಟಿ ಸಹಿತ ಫೆಲಸ್ತೀನ್ ಸಂಘಟನೆಗಳು ವಿರೋಧಿಸಿದ್ದವು‌.

ಓದುಗರೇ, ಸನ್ಮಾರ್ಗ ಫೇಸ್‌ಬುಕ್ ಪೇಜ್‌ನ್ನು ಲೈಕ್ ಮಾಡುವ ಮೂಲಕ ನಮ್ಮನ್ನು ಬೆಂಬಲಿಸಿ.