ಅಮೆರಿಕಾದ ಮೂವರು ಸೈನಿಕರ ಹತ್ಯೆ ಮಾಡಿದ ಇರಾನಿ ದಾಳಿಗೆ ಚೀನಾ ನೆರವು: ಆರೋಪ

0
404

ಸನ್ಮಾರ್ಗ ವಾರ್ತೆ

ಜೋರ್ಡಾನಿನಲ್ಲಿರುವ ಅಮೆರಿಕಾದ ಸೇನಾ ನೆಲೆಯ ಮೇಲೆ ಜುಲೈಯಲ್ಲಿ ಕ್ಷಿಪಣಿ ದಾಳಿ ನಡೆಸುವ ಮುನ್ನ ಚೀನಾದ ಮೂಲಗಳಿಂದ ಇರಾನ್ ಹೈ ರೆಸುಲ್ಯೂಷನ್ ಉಪಗ್ರಹ ಚಿತ್ರಗಳನ್ನು ಪಡೆದುಕೊಂಡಿತ್ತು ಎಂದು ಅಮೆರಿಕದ ಅಧಿಕಾರಿಗಳನ್ನು ಉಲ್ಲೇಖಿಸಿ ವಾಲ್ ಸ್ಟ್ರೀಟ್ ಜರ್ನಲ್ ವರದಿ ಮಾಡಿದೆ. ಈ ಚಿತ್ರಗಳು ಮೂವರು ಅಮೆರಿಕನ್ ಸೈನಿಕರನ್ನು ಕೊಂದ ಜೋರ್ಡನಿನ ವಾಯು ನೆಲೆಯ ಮೇಲಿನ ದಾಳಿಗೆ ಸಂಬಂಧಿಸಿದೆ. ಸಂಘರ್ಷದ ಸಮಯದಲ್ಲಿ ಚೀನಾ ನೀಡಿದ ಈ ಬೆಂಬಲವು ಅಮೆರಿಕನ್ನರ ಜೀವಹಾನಿಗೆ ಕಾರಣವಾದ ಘಟನೆಯ ಸ್ಪಷ್ಟ ಪುರಾವೆ ಎಂದು ಪರಿಗಣಿಸಲಾಗಿದೆ

ಜುಲೈ 17ರಂದು ಜೋರ್ಡಾನಿನ ವಾಯು ನೆಲೆಯ ಮೇಲೆ ಇರಾನ್ ಬ್ಯಾಲೆಸ್ಟಿಕ್ ಕ್ಷಿಪಣಿ ದಾಳಿ ನಡೆಸಿತ್ತು. ಇದರಲ್ಲಿ ಮೂವರು ಅಮೆರಿಕನ್ ಸೈನಿಕರು ಸಾವಿಗೀಡಾಗಿದ್ದರು. ನಾಲ್ವರು ಗಾಯಗೊಂಡಿದ್ದರು. ಈ ದಾಳಿಯ ಮೊದಲು ಮತ್ತು ನಂತರ ಇರಾನ್ ಗೆ ನಿಖರವಾದ ಉಪಗ್ರಹ ಚಿತ್ರಣವನ್ನು ಚೀನಾದಿಂದ ಪಡೆದುಕೊಂಡಿದೆ ಎಂದು ವರದಿ ಹೇಳಿದೆ

ಆದರೂ ಅಮೆರಿಕ ಇನ್ನೂ ಅಧಿಕೃತವಾಗಿ ಚೀನಾ ನೇರವಾಗಿ ಭಾಗಿಯಾಗಿದೆ ಎಂಬ ಆರೋಪ ಮಾಡಿಲ್ಲ. ಉಪಗ್ರಹ ಚಿತ್ರಗಳನ್ನು ಒದಗಿಸಿದ ಚೀನಾದ ಸಂಸ್ಥೆಗಳ ಹೆಸರುಗಳನ್ನೂ ಬಿಡುಗಡೆ ಮಾಡಲಾಗಿಲ್ಲ. ಅಮೆರಿಕದ ಹಿರಿಯ ಅಧಿಕಾರಿಗಳು ಚೀನಾದ ಪ್ರತಿನಿಧಿಗಳೊಂದಿಗೆ ಈ ವಿಷಯವನ್ನು ಎತ್ತಿದ್ದರೂ ಚೀನಾ ಆರೋಪಗಳನ್ನು ಸಂಪೂರ್ಣವಾಗಿ ನಿರಾಕರಿಸಿದೆ ಮತ್ತು ಪುರಾವೆಗಳನ್ನು ಕೋರಿದೆ

ಅಮೆರಿಕದ ಅಧ್ಯಕ್ಷ ಟ್ರಂಪ್ ಮತ್ತು ಚೀನಾದ ಅಧ್ಯಕ್ಷ ಜಿನ್ ಪಿಂಗ್ ಸೆಪ್ಟೆಂಬರ್ 24ರಂದು ಭೇಟಿಯಾಗಲಿರುವ ಹಿನ್ನೆಲೆಯಲ್ಲಿ ಈ ಬೆಳವಣಿಗೆ ನಡೆದಿದೆ. ಶೃಂಗಸಭೆಯ ಮೇಲೆ ಪರಿಣಾಮ ಬೀರಬಹುದಾದ ಸಾರ್ವಜನಿಕ ವಿವಾದವನ್ನು ತಪ್ಪಿಸಲು ಆಡಳಿತ ಯತಿಸುತ್ತಿದೆ