ಚೀನಾ ಭಾರತದೊಂದಿಗೆ ಗಡಿ ಯುದ್ಧ ನಡೆಸುತ್ತಿದೆ: ಅಮೆರಿಕನ್ ಸೆನೆಟರ್

0
496

ಸನ್ಮಾರ್ಗ ವಾರ್ತೆ

ವಾಷಿಂಗ್ಟನ್: ಚೀನ ನೆರೆಯ ದೇಶ ಭಾರತದೊಂದಿಗೆ ಗಡಿ ಯುದ್ಧದಲ್ಲಿ ತೊಡಗಿದೆ ಎಂದು ಅಮೆರಿಕದ ರಿಪಬ್ಲಿಕನ್ ಪಾರ್ಟಿ ಪಾರ್ಲಿಮೆಂಟಿನ ಸದಸ್ಯ ಜಾನ್ ಕಾರ್ನಿನ್ ಹೇಳಿದರು. ಈಶಾನ್ಯ ಏಷ್ಯದ ಘರ್ಷಣೆಯ ಕುರಿತು ಮಾಹಿತಿ ಹಂಚಿಕೊಳ್ಳುವ ಸಮಯದಲ್ಲಿ ಸೆನೆಟರ್ ಹೀಗೆ ಹೇಳಿದರು.

ಎರಡು ದೇಶಗಳ ನಡುವೆ ಗಡಿ ಯುದ್ಧ ನಡೆಯುತ್ತಿರುವುದು ನೆರೆಯ ಇತರ ದೇಶಗಳಿಗೆ ಬೆದರಿಕೆಯಾಗಿದೆ ಎಂದು ಜಾನ್ ಕಾರ್ನಿನ್ ಎಚ್ಚರಿಸಿದರು. ಇತೀಚೆಗೆ ಕಾರ್ನಿನ್ ಸಂಗಡಿಗರು ಈಶಾನ್ಯ ಏಷ್ಯ ಮತ್ತು ಹೊಸದಿಲ್ಲಿಗೂ ಬಂದು ಹೋಗಿದ್ದರು. ಪ್ರಾದೇಶಿಕ ಸಂಘರ್ಷದ ಸ್ಥಿತಿ ಬಗ್ಗೆ ತಿಳಿದುಕೊಳ್ಳುವುದಕ್ಕಾಗಿ ಅವರ ಭೇಟಿ ನಡೆದಿತ್ತು. ಭಾರತ ಚೀನಾ ಗಡಿಯ ಉದ್ವಿಗ್ನತೆಯ ಸವಾಲುಗಳ ಕುರಿತು ಸ್ವಅನುಭವಗಳನ್ನು ಕಾರ್ನಿನ್ ಸೆನೆಟ್ ಸಭೆಯಲ್ಲಿ ಹಂಚಿಕೊಂಡರು.