ಮೀನು ಪ್ಯಾಕೆಟ್‍ಗಳಲ್ಲಿ ವೈರಸ್: ಭಾರತದ ಕಂಪೆನಿಗೆ ನಿಷೇಧ ಹೇರಿದ ಚೀನ

0
542

ಸನ್ಮಾರ್ಗ ವಾರ್ತೆ

ಬೀಜಿಂಗ್,ನ.13: ಭಾರತದಿಂದ ತರಿಸಿಕೊಳ್ಳಲಾದ ಶೀತಲೀಕೃತ ಮೀನು ಪ್ಯಾಕೆಟಿನಲ್ಲಿ ಕೊರೋನ ವೈರಸ್ ಇರುವುದು ಕಂಡು ಬಂದಿದೆ ಎಂದು ಚೀನ ಹೇಳಿದೆ. ವೈರಸ್ ಕಂಡು ಬಂದ ನಂತರ ಭಾರತದ ಆಹಾರ ಸರಬರಾಜು ಕಂಪೆನಿ ಬಸು ಇಂಟರ್‍ನ್ಯಾಶನಲ್‍ಗೆ ಒಂದು ವಾರದ ರಫ್ತು ನಿಷೇಧವನ್ನು ಹೇರಲಾಗಿದೆ ಎಂದು ಚೀನದ ಕಸ್ಟಮ್ಸ್ ಕಚೇರಿ ತಿಳಿಸಿದೆ.

ಆಮದು ಮಾಡಿದ ಶೀತಲೀಕರಿಸಿದ ಆಹಾರ ಪ್ಯಾಕೆಟ್‍ನ ಮೇಲೆ ಜೀವಂತ ಕೊರೋನ ವೈರಸ್ ಉಪಸ್ಥಿತಿ ಕಂಡು ಬಂತೆಂದು ಚೀನ ತಿಳಿಸಿದೆ. ಕ್ವಿಂಗ್‍ಡೊದ ಆಮದು ಮಾಡಿಕೊಂಡ ಒಂದು ಪ್ಯಾಕೆಟ್‍ನಲ್ಲಿ ವೈರಸ್ ಇತ್ತು. ಪ್ಯಾಕೆಟ್‍ನ್ನು ಆಚೀಚೆ ಮಾಡಿದವರಲ್ಲಿ ಕೊರೋನ ರೋಗಕ್ಕೆ ಕಾರಣವಾಗಬಹುದು ಎಂದು ಚೀನ ತಿಳಿಸಿದೆ. ಜುಲೈಯಲ್ಲಿ ಶೀತಲೀಕೃತ ಸಿಗಡಿ ಮೀನು ಪ್ಯಾಕೆಟ್‍ನಲ್ಲಿ ನಿರ್ಜೀವಿ ವೈರಸ್ ಇತ್ತು. ನಂತರ ಸಿಗಡಿ ತರಿಸಿಕೊಳ್ಳದಂತೆ ಚೀನ ನಿಷೇಧ ಹೇರಿತ್ತು.