ಭಾರತ ತಲುಪಿದ ರಷ್ಯಾದ ಕೋವಿಡ್ ವ್ಯಾಕ್ಸಿನ್: ಕೊವಿಶೀಲ್ಡ್ ಕುರಿತು ಸಂತಸದ ಸುದ್ದಿ

0
668

ಸನ್ಮಾರ್ಗ ವಾರ್ತೆ

ಹೊಸದಿಲ್ಲಿ,ನ.13: ಇಡೀ ಜಗತ್ತು ಕೊರೋನ ವ್ಯಾಕ್ಸಿನ್‍ಗೆ ಕಾಯುತ್ತಿದೆ. ಈ ನಡುವೆ ಜಗತ್ತಿನ ಮೊದಲ ಕೊರೋನ ವ್ಯಾಕ್ಸಿನ್ ಸ್ಪುಟ್‍ನಿಕ್ ವಿ ಭಾರತಕ್ಕೆ ಬಂದಿದೆ. ಭಾರತದ ಫಾರ್ಮಾ ಕಂಪೆನಿ ಡಾ.ರೆಡ್ಡಿ ಲ್ಯಾಬರೇಟರೀಸ್ ವ್ಯಾಕ್ಸಿನ್‍ನ ಟ್ರಯಲ್ ಶುರುಮಾಡಿದೆ. ರಷ್ಯದಲ್ಲಿಯೂ ಇದರ ಕೊನೆಯ ಪರೀಕ್ಷೆ ನಡೆಯುತ್ತಿದೆ.

ವರದಿಯಾಗಿರುವ ಪ್ರಕಾರ ಫಾರ್ಮಾ ಕಂಪೆನಿ ಡಾ. ರೆಡ್ಡಿ ಲ್ಯಾಬರೇಟರೀಸ್ ಮಾನವರಲ್ಲಿ ಪರೀಕ್ಷೆ ಮಾಡುವುದಕ್ಕೆ ಅನುಮತಿ ಪಡೆದುಕೊಂಡಿದೆ. ಅದೂ ಕ್ಲಿನಿಕಲ್ ಪರೀಕ್ಷೆಯ ಸಿದ್ಧತೆಯಲ್ಲಿದೆ. ಮಲ್ಟಿ ಸೆಂಟರ್ ಮತ್ತು ರ್ಯಾಂಡಮ್ ತಂತ್ರಜ್ಞಾನದ ಮೂಲಕ ಸ್ಪುಟನಿಕ್ ವಿ ಅಧ್ಯಯನ ನಡೆಸಲಾಗುವುದು. ಇದರ ಸುರಕ್ಷೆ ಮಾನವರಲ್ಲಿ ಎಷ್ಟಿದೆ ಎಂದು ಪರಿಶೀಲಿಸಿ ನೋಡಲಾಗುತ್ತದೆ. ಕಾನೂನಾತ್ಮಕ ಅನುಮತಿ ಸಿಕ್ಕಿದರೆ ಡಾ.ರೆಡ್ಡಿ ಲ್ಯಾಬರೆಟರೀಸ್ 10 ಕೋಟಿ ಡೋಸ್ ವಿತರಣೆ ನಡೆಸಬಹುದಾಗಿದೆ.

ಸಿರಮ್ ಇನ್ಸಿಟಿಟ್ಯೂಟ್‍ನ ಕೊವಿಶೀಲ್ಡ್ ವ್ಯಾಕ್ಸಿನ್ ಕೂಡ ಕೊನೆಯ ಪರೀಕ್ಷೆಯಲ್ಲಿ ಯಶಸ್ವಿಯಾಗಿದೆ. ಕಂಪೆನಿ ಆರ್ಸಿಎಂಆರ್ ಕೊವಿಶೀಲ್ಡ್‌ನ ಕ್ಲಿನಿಕಲ್ ಟ್ರಯಲ್ ಕೊನೆಯ ಚರಣದಲ್ಲಿದೆ ಎಂದು ಘೋಷಿಸಿದೆ. ಆದರೆ ಈಗ ಐಸಿಎಂಆರ್ ನಿಗಾದಲ್ಲಿ ಇದರ ಪರೀಕ್ಷೆ ನಡೆಯುತ್ತಿದೆ ಎಂದು ಕಂಪೆನಿ ಸಿಇಒ ಅದಾರ್ ಪೂನಾವಾಲ ಹೇಳಿದ್ದರು.

ಮುಂದಿನ ವರ್ಷ ಆರಂಭದಲ್ಲಿ ಕೊರೋನದ ಸುರಕ್ಷಿತ ಮತ್ತು ಪ್ರಭಾವಿ ವ್ಯಾಕ್ಸಿನ್ ಹೊರತರುವ ನಿರೀಕ್ಷೆ ನನಗೆ ಇದೆ. ಪರೀಕ್ಷೆ ಸಫಲವಾಗಿದೆ. ಮಾನ್ಯತೆ ಸಿಕ್ಕ ನಂತರ ಜನವರಿ 2021ಕ್ಕೆ ವ್ಯಾಕ್ಸಿನ್ ಹೊರಬರಲಿದೆ ಎಂದು ಪೂನವಾಲ ಹೇಳಿದ್ದರು.

ಸ್ಪುಟನಿಕ್ ವಿ ಹೇಗೆ ಕೆಲಸ ಮಾಡುತ್ತದೆ?

ಈವರಗೆ ನಡೆದ ಪರೀಕ್ಷೆಯಲ್ಲಿ, ವ್ಯಾಕ್ಸಿನ್ ಸೆಲ್ಲ್‌ಯೂಲರ್ ಮತ್ತು ಆಂಟಿಬಾಡಿ ರಿಸ್ಪಾನ್ಸ್ ಜೆನರೆಟ್ ಮಾಡಿ ದೇಹಕ್ಕೆ ಕೊರೊನದೊಂದಿಗೆ ಹೋರಾಡುವ ಶಕ್ತಿಯನ್ನು ತಂದು ಕೊಡುತ್ತದೆ. ಅಕ್ಬೋಬರ್-ನವೆಂಬರ್‌ವರೆಗೆ ವ್ಯಾಕ್ಸಿನ್ ಪರೀಕ್ಷೆಯ ಫಲಿತಾಂಶ ಬರಬಹುದು ಎನ್ನಲಾಗಿತ್ತು. ಮುಂದಿನ ವರ್ಷ ಫೆಬ್ರುವರಿಯಲ್ಲಿ ವ್ಯಾಕ್ಸಿನ್ ಹೆಚ್ಚುಹೆಚ್ಚು ತಯಾರಿಕೆಯಾಗಲಿದೆ.

ಕೊವಿಶೀಲ್ಡ್ ಹೇಗೆ ಕೆಲಸ ಮಾಡುತ್ತದೆ?:

ವರದಿಯಾಗಿರುವ ಪ್ರಕಾರ ಎಸ್ಟ್ರೊಜೆನಕ ಮತ್ತು ಆಕ್ಸ್‌ಫರ್ಡ್ ಯುನಿವರ್ಸಿಟಿಯ ಕೊವಿಶೀಲ್ಡ್ ದೇಹದಲ್ಲಿ ಪ್ರೊಟೆಕ್ಟಿವ್ ಆಂಟಿ ಬಡಿಸ್ ಮತ್ತು ಟಿ-ಸೆಲ್ಸ್‌ನ್ನು ನಿರ್ಮಿಸುತ್ತದೆ. ಇದರಿಂದ ದೇಹಕ್ಕೆ ಕೊರೊನ ವೈರಸ್ ವಿರುದ್ಧ ಹೋರಾಡಲು ಸಹಾಯ ಆಗುತ್ತದೆ. ಮತ್ತು ಅವು ಸಾಯುತ್ತವೆ. ಆದರೆ ಇದರ ಕೊನೆಯ ಪರೀಕ್ಷೆ ಈಗ ನಡೆಯುತ್ತಿದೆ.

ಇತ್ತೀಚೆಗೆ ರಷ್ಯ ಸ್ಪುಟನಿಕ್ ವಿ ಕೊರೋನ ಚಿಕಿತ್ಸೆಯಲ್ಲಿ ಶೇ.92ರಷ್ಟು ಸುರಕ್ಷಿತವಾಗಿದೆ. ಹೀಗಿರುವಾಗ ಇದು ಕೊರೋನ ರೋಗ ನಿರ್ಮೂಲನಕ್ಕೆ ನಿರೀಕ್ಷೆಯ ಕಿರಣವಾಗಿದೆ.