ದಿಲ್ಲಿಯಲ್ಲಿ ಕೊರೋನ ಇಲ್ಲದ ಮನೆಗಳಿಲ್ಲ- ಹೈಕೋರ್ಟು

0
403

ಸನ್ಮಾರ್ಗ ವಾರ್ತೆ

ಹೊಸದಿಲ್ಲಿ,ನ.13: ದಿಲ್ಲಿ ನಗರದಲ್ಲಿ ಕೊರೋನ ಬಾಧಿಸದಿರುವ ಮನೆಗಳಿಲ್ಲ ಎಂದು ಸಮರ್ಪಿಸಿದ ಝಿರೋ ಸಮೀಕ್ಷೆ ವರದಿಯನ್ನು ತೋರಿಸಿ ಹೈಕೋರ್ಟು ಅಭಿಪ್ರಾಯ ವ್ಯಕ್ತಪಡಿಸಿದ್ದು ದಿಲ್ಲಿಯಲ್ಲಿ ಪ್ರತಿ 4 ಮಂದಿಯಲ್ಲಿ ಒಬ್ಬರಿಗೆ ಕೊರೋನ ಬಾಧೆ ತಗಲಿದೆ ಎಂದು ಸಮೀಕ್ಷೆ ತಿಳಿಸಿತ್ತು.

ಅಕ್ಟೋಬರ್ 15 ರಿಂದ 21ರವರೆಗೆ ರಾಜ್ಯ ಸರಕಾರ ಸಮೀಕ್ಷೆ ತಯಾರಿಸಿತ್ತು. 5,015 ಮಂದಿಯಲ್ಲಿ ನಡೆದ ಸಮೀಕ್ಷೆಯಲ್ಲಿ 25.5% ಜನರಲ್ಲಿ ವೈರಸ್ ವಿರುದ್ಧದ ಆ್ಯಂಟಿಬಾಡಿಕ್ ಕಂಡು ಬಂದಿತ್ತು. ಇದರಲ್ಲಿ ಶೇ.26.1ರಷ್ಟು ಮಹಿಳೆಯರಲ್ಲೂ ಶೇ. 25.06ರಷ್ಟು ಪುರಷರಲ್ಲಿಯೂ ಆ್ಯಂಟಿಬಾಡಿಕ್ ಕಂಡು ಬಂದಿದೆ.

ಮಧ್ಯ ದಿಲ್ಲಿಯ ಪರಿಸ್ಥಿತಿ ಗಂಭೀರವಾಗಿದೆ ಎಂದು ಲೆಕ್ಕಗಳು ವಿವರಿಸಿವೆ. ಇಲ್ಲಿ ಪರೀಕ್ಷಿಸಿದ ಸ್ಯಾಂಪಲ್‍ಗಳಲ್ಲಿ ಶೇ.49.48ರಷ್ಟು ಮಂದಿಗೆ ಆ್ಯಂಟಿಬಾಡಿಕ್ ಕಂಡು ಬಂದಿದೆ. ಸೆಪ್ಟಂಬರಿನಲ್ಲಿ ನಡೆಸಿದ ಮೂರನೆ ಹಂತದ ಸಮೀಕ್ಷೆಯಲ್ಲಿ ಶೇ. 25.1 ರಷ್ಟು ಜನರಲ್ಲಿ ಆ್ಯಂಟಿಬಾಡಿ ಕಂಟು ಬಂದಿದೆ. ಇಷ್ಟು ಗಂಭೀರ ಪರಿಸ್ಥಿತಿ ಇರುವಾಗ ಕೊರೋನ ನಿಯಂತ್ರಣದಲ್ಲಿ ಸಡಿಲಿಕೆ ಮಾಡಿದ್ದು ಯಾಕೆ ಎಂದು ಕೋರ್ಟು ಪ್ರಶ್ನಿಸಿತು.

ದಿಲ್ಲಿಯಲ್ಲಿ ಪ್ರತಿ ದಿನ ಕೊರೋನ ಸೋಂಕಿತರ ಸಂಖ್ಯೆ ಹೆಚ್ಚಳವಾಗುತ್ತಾ ಹೋಗುತ್ತಿದೆ. ಕಳೆದ ದಿನ 8,000ಕ್ಕೂ ಹೆಚ್ಚು ಕೊರೋನ ಪ್ರಕರಣಗಳು ವರದಿಯಾಗಿದೆ.